ಕರ್ನಾಟಕಪ್ರಮುಖ ಸುದ್ದಿ

85ರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಯೋಗಾಭ್ಯಾಸದಲ್ಲಿ ತೊಡಗುತ್ತಾರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ರಾಜ್ಯ(ಹಾಸನ) ಜೂ.21:- ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗವಾಗಿದ್ದು, ಇದು ಹಲವು ರೋಗಗಳ ನಿವಾರಕ ಹಾಗೂ ಮನಸಿನ ಶಾಂತಿಗೆ ಪೂರಕವಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದ ಗುಟ್ಟು ಕೂಡಾ ಯೋಗದಲ್ಲಿ ಅಡಗಿದೆ.

85ರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ  ನಿತ್ಯ ಯೋಗಾಭ್ಯಾಸ ನಡೆಸುತ್ತಾರೆ.  ವ್ಯಾಯಾಮ, ಹಿತಮಿತವಾದ ಸಸ್ಯಾಹಾರ ಸೇವನೆ ದಿನಚರಿಯನ್ನು ಪಾಲಿಸಿ ಗಟ್ಟಿಮುಟ್ಟಾಗಿದ್ದಾರೆ. ಇದೇ ಅವರ ಆರೋಗ್ಯದ ಗುಟ್ಟು.  ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗವಿದ್ಯೆಯು’ ಮುನಿಗಳಾದಿಯಾಗಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದ್ದು, ಇದೀಗ ಎಲ್ಲರೂ ಯೋಗಾಭ್ಯಾಸವನ್ನು ಮಾಡುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ತಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗಗುರುಗಳ ಸಹಾಯದಿಂದ ಯೋಗ ಕಲಿತು ಯೋಗಾಭ್ಯಾಸ ನಡೆಸುತ್ತಿರುವುದನ್ನು ಸ್ಮರಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: