ಮೈಸೂರು

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ವಸಂತ (30) ಸಾವು

ಒಳಚರಂಡಿ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನೋರ್ವನ ಮೇಲೆ ವಿದ್ಯುತ್ ಕಂಬ ಕುಸಿದು ಬಿದ್ದ ಪರಿಣಾಮ ಆತನು ಸ್ಥಳದಲ್ಲಿಯೇ ಸಾವನಪ್ಪಿದ್ದ ದುರ್ಘಟನೆಯು ಇಂದು (ಅ.8) ಮದ್ಯಾಹ್ನ ಘಟಿಸಿದೆ.

ಮೈಸೂರಿನ ಜೆ.ಪಿ.ನಗರದಲ್ಲಿ ಒಳಚರಂಡಿ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ವಸಂತ (30) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಈತನು ಒಳಚರಂಡಿ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಕಾಮಗಾರಿಯಲ್ಲಿ ಬಳಸಿದ್ದ ಜೆಸಿಬಿಯೂ ನೆಲ ಅಗೆದ ತೀವ್ರತೆಗೆ ಸಮೀಪದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂದು ಕಂಬ ನೇರವಾಗಿ ಬಿದ್ದ ಪರಿಣಾಮ ವಸಂತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಚರಂಡಿಯ ಅಡಿಪಾಯವು ಹಸಿಯಾಗಿದ್ದು ಈ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳಕ್ಕೆ ಮಹಾಪೌರ ಭೈರಪ್ಪ ಹಾಗೂ ಪೊಲೀಸ್ ಇನಸ್ಪೆಕ್ಟರ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Leave a Reply

comments

Related Articles

error: