ದೇಶಪ್ರಮುಖ ಸುದ್ದಿ

ಹಳೆಯ ನೋಟು ಸಂಗ್ರಹ ಬದಲಾವಣೆಗೆ ಡಿಸಿಡಿ ಬ್ಯಾಂಕ್‍ಗಳಿಗೆ ಕೇಂದ್ರ ಸರ್ಕಾರ ಅವಕಾಶ

ಬೆಂಗಳೂರು, ಜೂ.21 : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳು ಮತ್ತು ನಿರ್ದಿಷ್ಟ ಬ್ಯಾಂಕ್‍ಗಳು ಹಾಗೂ ಅಂಚೆ ಕಚೇರಿಗಳು ತಮ್ಮಲ್ಲಿ ಸಂಗ್ರಹವಾಗಿರುವ ಹಳೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‍ನೊಂದಿಗೆ ಬದಲಾಯಿಸಿಕೊಳ್ಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

ಮಂಗಳವಾರ ಈ ಕುರಿತು ನಿಯಮ ರೂಪಿಸಿ ಜಾರಿಗೆ ತರಲಾಗಿದ್ದು, ಅದನ್ನು ಜೂನ್ 20 ರಂದು ಗೆಜೆಟ್‍ನಲ್ಲಿ ಸೇರಿಸಲಾಗಿದೆ. ಈ ನಿಯಮಕ್ಕೆ “ನಿರ್ದಿಷ್ಟ ಬ್ಯಾಂಕುಗಳ ನೋಟುಗಳು (ಬ್ಯಾಂಕುಗಳು, ಅಂಚೆ ಕಚೇರಿಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು) ನಿಯಮ – 2017” ಎಂದು ಕರೆಯಲಾಗಿದೆ.

ರದ್ದಾದ ನೋಟುಗಳನ್ನು ಬದಲಿಸಲು ಡಿಸಿಸಿ ಬ್ಯಾಂಕುಗಳಿಗೆ ಅವಕಾಶ ನೀಡಬೇಕೆಂದು ಶಿವ ಸೇನಾ ಮತ್ತು ಹಲವು ಸಂಘಟನೆಗಳು ಒತ್ತಾಯ ಮಾಡಿದ್ದವು. ರದ್ದಾಗಿರುವ ₹500 ಮತ್ತು ₹1000 ನೋಟುಗಳನ್ನು ಮುಂದಿನ 30 ದಿನಗಳ ಒಳಗೆ ರಿಸರ್ವ್ ಬ್ಯಾಂಕ್‍ನೊಂದಿಗೆ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ನವೆಂಬರ್ 10 ರಿಂದ 14 ರ ವರೆಗೆ ಸಂಗ್ರಹಿಸಿರುವ ನೋಟುಗಳನ್ನು ಹಾಗೂ ಇತರ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಡಿಸೆಂಬರ್ 30 ಅಥವಾ ಅದಕ್ಕಿಂತ ಮುಂಚಿತವಾಗಿ ಸಂಗ್ರಹಿಸುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

-ಎನ್.ಬಿ.

Leave a Reply

comments

Related Articles

error: