ಕರ್ನಾಟಕ

ನಾನೂ ಅಸ್ಪಶೃತೆಗೆ ಒಳಗಾಗಿದ್ದೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂ.21-ನಾನು ವಿದ್ಯಾರ್ಥಿಯಾಗಿದ್ದಾಗ ನನಗೂ ಅಸ್ಪಶೃತೆಯ ಅನುಭವವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಅಧಿವೇಶನದಲ್ಲಿ ಇನ್ನೂ ಅದೆಷ್ಟೊ ಗ್ರಾಮಗಳಲ್ಲಿ ಅಸ್ಪಶೃತೆ ಜೀವಂತವಾಗಿದ್ದು, ಹಿಂದುಳಿದ ವರ್ಗದವರಿಗೆ ಊರ ಹೊರಗೆ ಬಿಂದಿಗೆ ಇಟ್ಟು ನೀರು ಹಾಕಿಸುತ್ತಾರೆ ಎಂದು ಬಿಜೆಪಿಯ ಸಚಿವ ಗೋವಿಂದ ಕಾರಜೋಳ ಹೇಳಿದಾಗ ಸಿಎಂ ತಮ್ಮ ಅನುಭವ ಹಂಚಿಕೊಂಡರು.

ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಒಂದು ಊರಿಗೆ ಹೋಗಿದ್ದೆ. ಊರಿನವರು ಚಪ್ಪಲಿ ಹಾಕಿಕೊಂಡು ಊರೊಳಗೆ ಹೋಗಬೇಡ ಕೈಯಲ್ಲಿ ಹಿಡಿದುಕೊಂಡು ಹೋಗು. ನಮ್ಮೂರಿನ ಪದ್ದತಿ ಇದು ಎಂದರು. ಇದಕ್ಕೆ ಒಪ್ಪದಿದ್ದ ಕಾರಣಕ್ಕೆ ಊರಿನವರು ಒಳಗೆ ಬಿಡಲಿಲ್ಲ. ಆಗ ನಿವೇ ನಮ್ಮೂರಿಗೆ ಬನ್ನಿ ಎಂದು ಹೇಳಿ ಬಂದೆ ಎಂದರು.

ಮುಂದುವರಿದು ಮಾತನಾಡಿದ ಅವರು, ಅವರು ನಮ್ಮೂರಿಗೆ ಬಂದಾಗ ಚಪ್ಪಲಿ ಕೈಯಲ್ಲಿ ಹಿಡಿದು ಹೋಗು ಅಂತಾ ಹೇಳಿದ್ದೆ. ಅವರು ಹಾಗೆ ಮಾಡದಿದ್ದರೆ ಗಲಾಟೆ ಮಾಡಿ ಅಂತ ನಮ್ಮ ಊರಿನ ಹುಡುಗರಿಗೆ ಹೇಳಿದ್ದೆ. ಇಂತಹ ಅನುಭವ ಅಂಬೇಡ್ಕರ್, ಜಗಜೀವನ್ ರಾಮ್ ಅವರಿಗೂ ಆಗಿದೆ ಎಂದರು.

ಇನ್ನೂ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬಗ್ಗೆ ಮಾತನಾಡಿದ ಅವರು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳಿ ನಾವು ಯಾರೋ ಕೆಲವರನ್ನು ಹೊರಗೆ ಇಡೋದೂ ಸರಿ ಅಲ್ಲ. ಸಮಾಜದಲ್ಲಿ‌ ಸಾಮರಸ್ಯ ಇರಬೇಕು. ಸಹಿಷ್ಣುತೆ ಇರಬೇಕು ಎಂದು ಬಯಸುತ್ತೇವೆ. ಸಮ ಸಮಾಜ ನಿರ್ಮಾಣ ನಮ್ಮ ಉದ್ದೇಶ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರ ಕನಸೂ ಇದೇ ಆಗಿತ್ತು ಎಂದು ಹೇಳಿದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: