ಮೈಸೂರು

ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡ್ ನಿಂದ ಹಲ್ಲೆ :ದೂರು

ಮೈಸೂರು,ಜೂ.21:- ಬಾಮೈದ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ಉದಯಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಮ್ಮದ್ ಶಬ್ಬೀರ್ ಎಂಬವರೇ ದೂರು ದಾಖಲಿಸಿದವರಾಗಿದ್ದಾರೆ. ಜೂ.19ರಂದು ಸಂಜೆ 5.30 ರ ವೇಳೆ ಗೌಸಿಯಾನಗರದ ಕೆರೆ ಬಳಿ ಇದ್ದಾಗ ಅಲ್ಲಿಗೆ ಬಂದ ಬಾಮೈದ ಸಾಹಿಲ್ ಖುರೇಷಿ ಅವಾಚ್ಯ ಶಬ್ದಗಳಿಂದ ಬೈಯ್ದು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಈತನ ವಿರುದ್ದ ಸೂಕ್ತ  ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: