ಕರ್ನಾಟಕ

ದುಡ್ಡು ಕೊಟ್ಟು ಕುಲಪತಿಗಳಾಗುತ್ತಿದ್ದಾರೆ: ಹೊರಟ್ಟಿ ಆರೋಪ

 

ಬೆಂಗಳೂರು,ಜೂ.21-ಪ್ರಸ್ತುತದಲ್ಲಿ ವಿಶ್ವದ್ಯಾನಿಲಯಗಳಿಗೆ ಕುಲಪತಿಗಳು ದುಡ್ಡು ಕೊಟ್ಟು ಬರುತ್ತಿದ್ದಾರೆ ಎಂದು ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಆರೋಪಿಸಿದ್ದಾರೆ.

ದುಡ್ಡುಕೊಟ್ಟ ಕುಲಪತಿಗಳಾದವರು ವಿಶ್ವವಿದ್ಯಾನಿಲಯಗಳಲ್ಲಿ ದುಡ್ಡು ಮಾಡಿಕೊಳ್ಳುತ್ತಾರೆ. ಕುಲಪತಿಗಳು ಭ್ರಷ್ಟಾಚಾರಿಗಳಾಗುತ್ತಿದ್ದು, ಈ ವ್ಯವಸ್ಥೆಯಿಂದ ವಿಶ್ವವಿದ್ಯಾನಿಲಯಗಳು ಹಾಳಾಗುತ್ತಿದೆ. ಇವತ್ತಿನ ಈ ವ್ಯವಸ್ಥೆಯಿಂದ ಕುಲಪತಿ ಹುದ್ದೆಯೇ ವ್ಯಾಪಾರವಾಗಿದೆ ಎಂದು ಆರೋಪಿಸಿದರು.

ಇದನ್ನು ನೋಡಿದರೆ ಕುಲಪತಿ ಹುದ್ದೆಗೋಸ್ಕರ ಸಂಗೀತ ವಿಶ್ವವಿದ್ಯಾನಿಲಯ ಮಾಡಿದಂತಿದ್ದು, ವಿಶ್ವವಿದ್ಯಾಲಯ ಮಾಡಿದ  ಮೇಲೆ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯಗೋಸ್ಕರ ಕುಲಪತಿಗಳ ನೇಮಕವಾಗುತ್ತಿದೆ. ಮೊದಲು ವಿವಿಯ ಅಭಿವೃದ್ದಿ ಬಗ್ಗೆ ಗಮನಹರಿಸಿ ಎಂದು ಉನ್ನತ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಹೊರಟ್ಟಿ, ವಿವಿ ಅಭಿವೃದ್ಧಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ತಮ್ಮವರನ್ನ ಕುಲಪತಿ ಮಾಡಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ವಿಧೇಯಕದಲ್ಲಿ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರ ವಯೋಮಿತಿ 65 ರಿಂದ 70ಕ್ಕೆ ಹೆಚ್ಚಳ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಭಾನುಪ್ರಕಾಶ್, ರಾಮಚಂದ್ರಗೌಡ, ರಮೇಶ್ ಬಾಬು ಧ್ವನಿಗೂಡಿಸಿದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: