ಸುದ್ದಿ ಸಂಕ್ಷಿಪ್ತ

ಡಾ.ಮಳಲಿ ವಸಂತಕುಮಾರ್ ಅಭಿನಂದನಾ ಸಮಾರಂಭ ಜೂ.25ಕ್ಕೆ

ಮೈಸೂರು.ಜೂ.21 : ಜಿಲ್ಲಾ ಕಸಾಪ, ಕರ್ನಾಟಕ ವಿಚಾರ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಭೂಮಿಗಿರಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಜೂ.25ರ ಸಂಜೆ 4.30ಕ್ಕೆ ಹಿರಿಯ ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಅವರಿಗೆ ಅಭಿನಂದನಾ ಸಮಾರಂಭವನ್ನು ಅರಮನೆ ಆವರಣದಲ್ಲಿರುವ ಕಸಾಪ ಕಚೇರಿಯಲ್ಲಿ ಹಮ್ಮಿಕೊಂಡಿದೆ.

ಡಾ.ನೀಲಗಿರಿ ಎಂ.ತಳವಾರ್ ಉದ್ಘಾಟಿಸುವರು, ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು, ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಹೆಚ್.ಜಿ.ಲಕ್ಕಪ್ಪಗೌಡ ಇವರನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: