ಮೈಸೂರು

ಸೆಲ್ಫಿ ಪ್ರಿಯರಿಗೆ ಸಿಹಿ ಸುದ್ದಿ ಮೈಸೂರಿನಲ್ಲಿ ಐಫೆಲ್ ಟವರ್

ಮೈಸೂರು.ಜೂ.21: ಐಫೆಲ್ ಗೋಪುರದೆದುರು ಸೆಲ್ಫಿ ತೆಗೆಯುವ ಕನಸು ಮೈಸೂರಿಗರಿಗೆ ನನಸಾಗುವ ಕಾಲ ಸನ್ನಿಹಿತವಾಗಿದೆ. ಸೆಲ್ಫಿ ಪ್ರಿಯರಿಗಾಗಿ ಪ್ಯಾರಿಸ್ ಅತಿ ಆಕರ್ಷಣೆ ಕೇಂದ್ರ ಐಫೆಲ್ ಟವರ್ ಪ್ರತಿಕೃತಿಯನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನದ ಒಳಾಂಗಣದ ಮಾಲ್ ಆಫ್ ಮೈಸೂರು ಎದುರಿಗೆ ಸ್ಥಾಪಿಸಲಾಗುತ್ತಿದೆ.

ರಾಷ್ಟ್ರೀಯ ಗ್ರಾಹಕ ಮೇಳದಂಗವಾಗಿ ಐಫೆಲ್ ಟವರ್ ಬೃಹತ್ ಪ್ರತಿಕೃತಿ ನಿರ್ಮಾಣವಾಗುತ್ತಿದ್ದು ಜೂ.23 ರಿಂದ ಆಗಸ್ಟ್ 15ರವರೆಗೆ ಸಾರ್ವಜನಿಕರ ಪ್ರದರ್ಶನಕ್ಕೆ ಮುಕ್ತವಾಗಿದೆ.  ಗೋಪುರವೂ ಸುಮಾರ 90 ಅಡಿ ಎತ್ತರ 50 ಚದರಡಿ 20 ಟನ್ ತೂಕದ ಉಕ್ಕು ಬಳಸಲಾಗಿದೆ. ಚೆನೈನ ಇಂಜಿನಿಯರ್  ಶೇಖರ್ ಅವರ ಕನಸಿನ ನಿರ್ಮಾಣವಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: