ಮೈಸೂರು

ರೆಕಾರ್ಡ್ ರೂಂಗೆ ಬೆಂಕಿ ತಗುಲಿ ದಾಖಲೆಗಳು ಭಸ್ಮ

ಮೈಸೂರು(ಪಿರಿಯಾಪಟ್ಟಣ)ಜೂ.21:- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಹಳೆಯ ರೆಕಾರ್ಡ್ ರೂಂಗೆ ಬೆಂಕಿ ತಗುಲಿ ದಾಖಲೆಗಳು ಸುಟ್ಟು ಹೋಗಿರುವ ಘಟನೆ ನಡೆದಿದೆ.
ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಸುಮಾರು 30 ಹಳೆಯ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ರೆಕಾರ್ಡ್ ರೂಂನಲ್ಲಿ  ಬೆಂಕಿ ಕಾಣಿಸಿಕೊಂಡಿದ್ದು,  ಈ ಸಂದರ್ಭದಲ್ಲಿ ಕಚೇರಿಯಿಂದ ಹೊರಗೆ ಬಂದ ಡಿ ಗ್ರೂಪ್ ನೌಕರ ತಕ್ಷಣ ಆಡಳಿತಾಧಿಕಾರಿ ಡಾ.ರವಿ ಅವರಿಗೆವಿಷಯ ತಿಳಿಸಿದ್ದಾರೆ. ತಡ ಮಾಡದೆ ಕೊಠಡಿಯ ಬೀಗ ತೆಗೆದು ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸುವ ವೇಳೆಗಾಗಲೆ ಶೇ.10ರಷ್ಟು ದಾಖಲೆಗಳು ಬೆಂಕಿಗೆ ಅಹುತಿಯಾಗಿದೆ.
ಬೆಂಕಿಯನ್ನು ತಕ್ಷಣ ನಂದಿಸಿದ್ದರಿಂದ ಸಮೀಪದಲ್ಲೇ  ಇರುವ ಒಳರೋಗಿಗಳ ಕೊಠಡಿಗೆ ಬೆಂಕಿ ವ್ಯಾಪಿಸುವುದು ತಪ್ಪಿ ಹೆಚ್ಚಿನ ಅನಾಹುತ ನಡೆಯುವುದು ತಪ್ಪಿದೆ ಎಂದು ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕಿಡಿಗೇಡಿಗಳು ಹಚ್ಚಿದ ಬೆಂಕಿಯೇ  ಅಥವಾ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆಯೇ  ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.  ಈ ಕೊಠಡಿಯ ಬಳಿ ಸಿಸಿ ಟಿವಿ ಅಳವಡಿಸದೆ ಇರುವುದು ಪ್ರಕರಣದ ತನಿಖೆಗೆ ಅಡ್ಡಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: