ದೇಶಪ್ರಮುಖ ಸುದ್ದಿವಿದೇಶ

ಬೆಂಗಳೂರಿನಲ್ಲಿ 71 ಕೋಟಿ ರೂ. ಮೌಲ್ಯದ ಅಕ್ರಮ ಟರ್ಕಿ ಕರೆನ್ಸಿ ವಶ

ಬೆಂಗಳೂರು, ಜೂ. 21: ಮಾರತ್ ಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಅವರಿಂದ 5 ಲಕ್ಷ ಲಿರಾ ಮುಖಬೆಲೆಯ 78 ಟರ್ಕಿ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ನಾಗರಾಜ್, ಅರವಿಂದ್, ಮುರಳಿ ಮತ್ತು ಶಿವರಾಜ್ ಬಂಧಿತ ಆರೋಪಿಗಳು.

ಕರೆನ್ಸಿ ನೋಟುಗಳು ಮಾತ್ರವಲ್ಲದೆ ಪಿಸ್ತೂಲ್ ಕೂಡಾ ಸಿಕ್ಕಿದೆ. 1 ಟರ್ಕಿ ಲಿರಾ ಭಾರತದ 18.24 ರೂಪಾಯಿಗಳಿಗೆ ಸಮ. ವಶಪಡಿಸಿಕೊಂಡಿರುವ ಲಿರಾ ಕರೆನ್ಸಿಯ ಮೌಲ್ಯ ಭಾರತೀಯ ರೂಪಾಯಿ ಮೌಲ್ಯದಲ್ಲಿ 71 ಕೋಟಿ ರೂಪಾಯಿಗಳಾಗಿವೆ.  ಮೂಲಗಳ ಪ್ರಕಾರ 5 ಲಕ್ಷ ಮುಖಬೆಲೆಯ ಲಿರಾ ಕರೆನ್ಸಿಗಳನ್ನು ನಿಷೇಧಿಸಲಾಗಿದೆ.

ಈ ತಂಡ ಅಕ್ರಮವಾಗಿ ಈ ಹಣ ಸಾಗಣೆ ಮಾಡಿದೆ ಎನ್ನಲಾದ್ದು, ಈ ತಂಡದ ಮಾಸ್ಟರ್ ಮೈಂಡ್ ಆಂಧ್ರ ಪ್ರದೇಶ ಮೂಲದ ಚಿನ್ನಾ ರೆಡ್ಡಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: