ಮೈಸೂರು

ವಿಷ ಸೇವಿಸಿ ರೈತ ಆತ್ಮಹತ್ಯೆ

ಮೈಸೂರು, ಜೂ.21: ಸಾಲ ಬಾಧೆ ತಾಳಲಾರದೆ  ರೈತನೋರ್ವ ಕ್ರೀಮಿನಾಶಕ  ಔಷಧಿ ಸೇವಿಸಿ ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಹೋಬಳಿಯ ಹರಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದ್ರೇಗೌಡ ಬಿನ್ ಲೇ. ಸಣ್ಣೇಗೌಡ (46) ಮೃತ ದುರ್ದೈವಿ.  ಕಬ್ಬು ಬೆಳೆಗಾಗಿ ಗೊಬ್ಬರ ಖರೀದಿಸಲು ಹೊಸ ಅಗ್ರಹಾರ ವ್ಯವಸಾಯ ಸಹಕಾರ ಸಂಘದಲ್ಲಿ 97 ಸಾವಿರ ರೂ. ಸಾಲ ಮಾಡಿದ್ದರು. ಅಲ್ಲದೇ ಮೂರು ಲಕ್ಷ  ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು,  ಕಬ್ಬು ಬೆಳೆಯೂ ಸಹ ನೀರಿಲ್ಲದೆ ಒಣಗಿತ್ತು. ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಆರ್.ವಿ, ಎಲ್.ಜಿ)

Leave a Reply

comments

Related Articles

error: