ಕರ್ನಾಟಕಪ್ರಮುಖ ಸುದ್ದಿ

ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮರ್‍ಮೀನಾ ಅವರಿಗೆ ಸನ್ಮಾನ

ರಾಜ್ಯ(ಚಾಮರಾಜನಗರ)ಜೂ.21:- ಗಾರೆ ಕಾರ್ಮಿಕರ ಸಂಘದವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮರ್‍ಮೀನಾ ಅವರನ್ನು ಸನ್ಮಾನಿಸಲಾಯಿತು.
ಬಳಿಕ  ಮನವಿ ಮಾಡಿದ ಸಂಘದ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು ಮಾತನಾಡಿ ಜಿಲ್ಲೆಯಲ್ಲಿ ಗಾರೆ ಕೆಲಸಗಾರರು ಹಾಗೂ ಇನ್ನಿತರೇ  ಕೆಲಸಗಾರರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಮರಳುನೀತಿಯನ್ನು ಜಾರಿಗೆ ತರಬೇಕು.  ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಆದರೆ ಕೆಲವು ಅಧಿಕಾರಿಗಳು ಈ ವಿಚಾರದಲ್ಲಿ ಲೋಪ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಮರಳಿಲ್ಲದೆ ಗಾರೆ ಕೆಲಸಗಾರರಿಗೆ ಕೆಲಸವಿಲ್ಲದಂತಾಗಿದೆ ಹಾಗೂ ಸಂಚಾರ ಪೋಲಿಸ್ ವ್ಯವಸ್ಥೆಯನ್ನು ಇನ್ನು ಉತ್ತಮ ಗೊಳಿಸಬೇಕು ಎಂದರು.
ಸಂಘದ ಕಾರ್ಯದರ್ಶಿ ಕುಮಾರಿ,ಸಿದ್ದರಾಜು, ಬಂಕರಾಜು, ಸಣ್ಣಮಾದಯ್ಯ, ಶಂಕರ್,ಜಿ.ಎಂ.ಮಹದೇವು, ಸೋಮ, ಪ್ರಕಾಶ್,ಪಿ.ಮಹೇಶ್, ಎಸ್.ಎನ್.ಮಹೇಶ್, ಮಹದೇವಸ್ವಾಮಿ  ಮುಂತಾದವರು ಹಾಜರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: