ಮೈಸೂರು

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಆರ್ಥಿಕ ನೆರವಿಗಾಗಿ 5 ಲಕ್ಷ ರೂ. ಮೀಸಲು : ವಿ.ರಾಜೇಂದ್ರ

ಮೈಸೂರು(ಪಿರಿಯಾಪಟ್ಟಣ)ಜೂ.21:-  ತಾಲೂಕಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಆರ್ಥಿಕ ನೆರವಿಗಾಗಿ 5 ಲಕ್ಷ ರೂ.ಗಳನ್ನು ಮೀಸಲಿಡುವುದಾಗಿ ಜಿ.ಪಂ.ಸದಸ್ಯ ವಿ.ರಾಜೇಂದ್ರ ಘೋಷಣೆ ಮಾಡಿದರು.
ತಾಲೂಕಿನ ದೊಡ್ಡಕಮರವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು. 150 ವಿದ್ಯಾರ್ಥಿಗಳಿಗೆ 30 ಸಾವಿರ ವೆಚ್ಚದ ನೋಟ್ ಬುಕ್ ಗಳನ್ನು ವಿತರಿಸಿದ ಅವರು ಮುಂದಿನ ವರ್ಷದಿಂದ ತಾಲೂಕಿನ  ಎಸ್.ಎಸ್.ಎಲ್.ಸಿ.ಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಇದೇ ರೀತಿ ಅನಾಥ ವೃದ್ದರಿಗೂ ಸಹ ತಮ್ಮ ಜೀವನೋಪಾಯಕ್ಕಾಗಿ ಆರ್ಥಿಕ ಅನುಕೂಲವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ ಅವರು ತಮ್ಮ ಬಾಲ್ಯದಲ್ಲಿ ಬಡತನದಿಂದ ವಿದ್ಯಾಭ್ಯಾಸಕ್ಕೆ ತಮಗಾದ ತೊಂದರೆಯ ಬಗ್ಗೆ ನೆನಪಿಸಿಕೊಂಡರು. ಸರ್ಕಾರವೂ ಸಹ ಗ್ರಾಮೀಣ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹೇಮಂತಕುಮಾರ್, ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ್, ಸಹಶಿಕ್ಷಕರಾದ ಸಣ್ಣಸ್ವಾಮಿ, ಲೀಲಾವತಿ, ಮೂರ್ತಿ, ಕೃತಿಕಾ, ನಂದಿನಿ, ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: