ಮೈಸೂರು

ರೋಗಗಳಿಂದ ಮುಕ್ತರಾಗಲು ಯೋಗ ಅವಶ್ಯಕ : ಎಂ.ದಯಾನಂದ್‍

ಮೈಸೂರು,(ನಂಜನಗೂಡು): ಜೂ 21- ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣಾ ಅಂಗವಾಗಿ ನಂಜನಗೂಡಿನ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಯೋಗ ಪ್ರದರ್ಶನಕ್ಕೆ ತಹಶೀಲ್ದಾರ್ ಎಂ.ದಯಾನಂದ್‍ ಚಾಲನೆ ನೀಡಿದರು.
ಬಳಿಕ  ಮಾತನಾಡಿದ ಅವರು ಮನುಷ್ಯನ ನಿತ್ಯ ಜೀವನದಲ್ಲಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅದರಲ್ಲೂ ರಕ್ತದ ಒತ್ತಡ, ಹೃದಯ ಸಂಬಂಧಿ ರೋಗ, ಮಾನಸಿಕ ಒತ್ತಡ, ಇನ್ನೂ ಹಲವಾರು ರೋಗಗಳಿಂದ ಮುಕ್ತರಾಗಲು ಪ್ರಾಚೀನ ಯುಗದಿಂದಲೂ, ಋಷಿ ಮುನಿಗಳ ತಪಸ್ಸಿನ ಫಲವಾಗಿ, ಅವರುಗಳ ಅನುಭವಗಳಿಂದ ಸಿದ್ಧಿಸಿರುವ ಈ ಯೋಗವನ್ನು 180 ರಾಷ್ಟ್ರಗಳಲ್ಲೂ ಇಂದು  ಆಚರಿಸುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ಎಲ್ಲರೂ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಯೋಗ ಶಿಕ್ಷಕಿ ಮೇಘನ, ವ್ಯಾಯಾಮದ ಕ್ರಮಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಇ.ಒ. ರೇವಣ್ಣ, ಜಿ.ಪಂ.ಸದಸ್ಯೆ ಮಧುಸುಬ್ಬಣ್ಣ, ಆಯುಷ್ ಇಲಾಖೆಯ ವೈದ್ಯೆ ವೇದವತಿ, ತಾ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ಶಿವಣ್ಣ, ತಾ.ಪಂ.ಸದಸ್ಯ ಸಿ.ಎಮ್.ಮಹದೇವು, ದೈಹಿಕ ಶಿಕ್ಷಕ ನಾಯಕ್, ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ, ಅಯುಷ್ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಅಧ್ಯಕ್ಷ ರೇವಣ್ಣ, ಯೋಗ ಗುರು ಗಣೇಶ್, ಹರೀಷ್, ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: