ದೇಶಪ್ರಮುಖ ಸುದ್ದಿ

ರಿಲಯನ್ಸ್ ಜಿಯೋ: ಹೆಚ್ಚು ಡಾಟ ಬಳಸಿದಷ್ಟೂ ಕಡಿಮೆ ದರ, ಫ್ರೀ ವಾಯ್ಸ್ ಕಾಲ್ ಕೊಡುಗೆ!

AllNewsImage501> ಸೆಂಪ್ಟೆಂಬರ್ 5ರಿಂದ ಎಲ್ಲರಿಗೂ ಸಿಮ್ ಲಭ್ಯ.

> ಭಾರತದ ಯಾವ ಮೂಲೆಗೆ ಬೇಕಾದರೂ ಉಚಿತವಾಗಿ ಕರೆ ಮಾಡಬಹುದು.
> ರೋಮಿಂಗ್ ಚಾರ್ಜ್ ಇಲ್ಲ, ಕರೆ ದರ ಕೂಡ ಶೂನ್ಯ.
> ಡಾಟ ಬಳಕೆದಾರರಿಗೆ ಮಿತಿ ಇಲ್ಲ.
> 50 ರೂ.ಗೆ 1 ಜಿಬಿ ಡಾಟ.
> ಜಿಯೋ ಸಂಗ್ರಹದಲ್ಲಿರುವ ಆರು ಸಾವಿರ ಸಿನಿಮಾ ವೀಕ್ಷಣೆಗೆ, ಹತ್ತು ಸಾವಿರ ಹಾಡುಗಳ ಆಲಿಸಲು ಅವಕಾಶ.
> ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಕಳುಹಿಸುವ ಸಂದೇಶಗಳಿಗೆ ಹೆಚ್ಚುವರಿ ದರ ಇಲ್ಲ.
> ಡಾಟ ಅಥವಾ ಕರೆ ಎರಡರಲ್ಲಿ ಒಂದಕ್ಕೆ ಹಣ ಪಾವತಿಸಿಬೇಕಷ್ಟೆ.
> ಒಂದು ಕೊಂಡರೆ ಒಂದು ಉಚಿತ.
> ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ಹೆಚ್ಚು ಡಾಟ ಕೊಡುಗೆ.

 

 

ರಿಲಯನ್ಸ್‌ ಜಿಯೋ ಟಾರಿಫ್‌ ದರವನ್ನು ಪ್ರಕಟಿಸಲಾಗಿದ್ದು, ಹೆಚ್ಚು ಡಾಟ ಬಳಸಿದಷ್ಟೂ ಕಡಿಮೆ ದರ ವಿಧಿಸುವ ಅತ್ಯಾಕರ್ಷಕ ಕೊಡುಗೆಯನ್ನು ಇದು ಒಳಗೊಂಡಿದೆ. ಮುಂಬೈನಲ್ಲಿ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಮಾತನಾಡಿದ ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಅವರು ಟಾರೀಫ್ ದರಗಳನ್ನು ಪ್ರಕಟಿಸಿದ್ದು, ಜಿಯೋ ಬಳಕೆದಾರರಿಗೆ ಫ್ರೀ ವಾಯ್ಸ್‌ ಕಾಲಿಂಗ್‌ ನೀಡುವುದಾಗಿ ತಿಳಿಸಿದ್ದಾರೆ.

ಭಾರತದ ಯಾವುದೇ ಸ್ಥಳದಿಂದಾರೂ ಉಚಿತವಾಗಿ ಜಿಯೋ ಬಳಕೆದಾರರು ವಾಯ್ಸ್‌ ಕಾಲ್‌ ಮಾಡಬಹುದು. ಇದು ಮಾತ್ರವಲ್ಲದೆ ರೊಮಿಂಗ್‌ ಕರೆಗಳಿಗೆ ಯಾವುದೆ ದರ ವಿಧಿಸುವುದಿಲ್ಲ. ಅಂದರೆ ಸಂಪೂರ್ಣ ಉಚಿತ. ಗ್ರಾಹಕರು ಕರೆಗಳಿಗೆ ಅಥವಾ ಡಾಟಾ ಎಡರಲ್ಲಿ ಒಂದಕ್ಕೆ ಮಾತ್ರ ಪಾವತಿಸಬೇಕಿದೆ.

ಅಂತರ್ಜಾಲ ಬಳಕೆದಾರರಿಗೆ ಡಾಟ ಲೋಡಿಂಗ್ ವೇಗ ಮತ್ತು ಮಿತಿಯಿಲ್ಲದ ಡಾಟ ಪೂರೈಕೆ ಅಗತ್ಯವಿದ್ದು, ರಿಲಯನ್ಸ್ ಸಂಸ್ಥೆಯ ಈ ನಿರ್ಧಾರದಿಂದ ಭಾರತದಲ್ಲಿ ಡಿಜಿಟಲ್ ಬಳಕೆ-ಪ್ರಯೋಜನ ಮತ್ತಷ್ಟು ಉತ್ತಮಗೊಳ್ಳಲಿದೆ. ಗ್ರಾಹಕರಿಗೆ ಡಾಟಾ ಕೊರತೆ ಕಾಡದಂತೆ ನೋಡಿಕೊಳ್ಳುವುದು ಜಿಯೋನ ಉದ್ದೇಶ ಎಂದು ಮುಖೇಶ್ ತಿಳಿಸಿದರು.

Leave a Reply

comments

Related Articles

error: