ಕರ್ನಾಟಕಪ್ರಮುಖ ಸುದ್ದಿ

ಜಂತಕಲ್ ಮೈನಿಂಗ್ ಪ್ರಕರಣ : ಲಂಚದ ಹಣದಲ್ಲಿ ಮಗನಿಗೆ ಶಿಕ್ಷಣ ಕೊಡಿಸಿದರೆ ಬಡೇರಿಯಾ?

ಬೆಂಗಳೂರು, ಜೂ.21 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಆರೋಪಿ ಸ್ಥಾನದಲ್ಲಿರುವ ಜಂತಕಲ್ ಮೈನಿಂಗ್ ಲಂಚ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರು ತಮ್ಮ ಪುತ್ರನ ಕೆರಿಯರ್‍ಗಾಗಿ ಹಣ ಪಡೆದಿದ್ದರು ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಲಂಡನ್‍ನಲ್ಲಿ ಸಂಗೀತ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ತಮ್ಮ ಮಗ ಗಗನ್ ಕೆರಿಯರ್‍ಗಾಗಿ ಬಡೇರಿಯಾ ಚೆಕ್ ಮೂಲಕ 20 ಲಕ್ಷ ರೂ. ಲಂಚ ಪಡೆದಿದ್ದರು ಎನ್ನಲಾಗಿದೆ. ಪುತ್ರ ಗಗನ್ ಖಾತೆಗೆ ಈ 20 ಲಕ್ಷ ಲಂಚದ ಹಣ ಚೆಕ್ ಮೂಲಕ ನೇರವಾಗಿ ಜಮೆ ಆಗಿದೆ. ಲಂಚ ಪಡೆದ ಹಣದಿಂದ ಬಡೇರಿಯಾ ಮಗನ ವ್ಯಾಸಂಗ ಲಂಡನ್‍ನಲ್ಲಿ ನಡೆದಿದೆ ಎನ್ನಲಾಗಿದೆ.

-ಎನ್.ಬಿ.

Leave a Reply

comments

Related Articles

error: