ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಸರ್ಕಾರ ಸಾಲ ಮನ್ನಾ ಮಿತಿಯನ್ನು ಹೆಚ್ಚಿಸಬೇಕು: ಎಚ್ಡಿಕೆ

ರಾಜ್ಯ, (ಬೆಳಗಾವಿ) ಜೂ.21: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು ಸ್ವಾಗತಾರ್ಹ. ಆದರೆ ಬೇರೆ ರಾಜ್ಯಗಳಂತೆ ನಮ್ಮ ರಾಜ್ಯ ಸರ್ಕಾರವು ಸಹ ಸಾಲ ಮನ್ನಾ ಮಿತಿಯನ್ನು ಹೆಚ್ಚಿಸಬೇಕು ಎಂದು  ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಳಗಾವಿಯ ಅಥಣಿ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದರಿಂದ ಎರಡು ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ ಮಾತ್ರ ಸಹಕಾರಿ ಬ್ಯಾಂಕಗಳ 50 ಸಾವಿರ ರೂ. ವರೆಗಿನ ಸಾಲ ಮಾತ್ರ ಮನ್ನಾ ಮಾಡಿದೆ. ಬೇರೆ ರಾಜ್ಯಗಳಂತೆ ನಮ್ಮ ರಾಜ್ಯ ಸರ್ಕಾರವು ಸಹ ಸಾಲ ಮನ್ನಾ ಮಿತಿಯನ್ನು ಹೆಚ್ಚಿಸಬೇಕು ಎಂದರು.

ರೈತರ ಸಾಲ ಮನ್ನಾ ಮಾಡಿದರೆ ಉಳಿದ  ಬ್ಯಾಂಕ್ ಗಳು ದಿವಾಳಿಯಾಗುತ್ತವೆ  ಎಂದು ಆರ್.ಬಿ.ಐ ಗವರ್ನರ್‌ ಉರ್ಜಿತ್ ಪಟೇಲ್ ಹೇಳಿರುವ ಉದ್ದಟತನದ ಮಾತು  ಖಂಡನೀಯ.  ಸಾವಿರಾರು ಕೋಟಿ ರೂ. ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ಆಗದ ಬ್ಯಾಂಕ್  ದಿವಾಳಿ ಈಗ ಆಗುತ್ತದೆಯೇ..? ಹಾಗಾಗಿ ಉರ್ಜಿತ್ ಪಟೇಲ್ ನನ್ನು ದೇಶದಿಂದ ಗಡಿ ಪಾರು ಮಾಡಲು ಎಚ್. ಡಿ ಕುಮಾರಸ್ವಾಮಿ ಆಗ್ರಹಿಸಿದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: