ಮೈಸೂರು

ಗಿನ್ನಿಸ್ ಯೋಗ ಪ್ರದರ್ಶನ: ಎನ್ಆರ್ ಸಮೂಹದ ಅಂಧ ವಿದ್ಯಾರ್ಥಿಗಳು, ನೌಕರರು ಭಾಗಿ

ಮೈಸೂರು,ಜೂ.21- 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದ ರೇಸ್ ಕೋರ್ಸ್‍ನಲ್ಲಿ ಬುಧವಾರ ಆಯೋಜಿಸಿದ್ದ ಗಿನ್ನಿಸ್ ಯೋಗ ಪ್ರದರ್ಶನದಲ್ಲಿ ಸೈಕಲ್ ಪ್ಯೂರ್ ಅಗರಬತೀಸ್ ಮತ್ತು ರಂಗ ರಾವ್ ಸ್ಮಾರಕ ವಿಕಲಚೇತನರ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಸುಮಾರು 40 ಅಂಧ ವಿದ್ಯಾರ್ಥಿಗಳು ಹಾಗೂ ಸೈಕಲ್ ಪ್ಯೂರ್ ಅಗರಬತ್ತೀಸ್‍ನ ಎಲ್ಲ ಘಟಕಗಳ ಸುಮಾರು 1,000 ನೌಕರರು ಪ್ರದರ್ಶನದಲ್ಲಿ ಭಾಗವಹಿಸಿ ಯೋಗ ಮಾಡಿದರು.

ಇದರಲ್ಲಿ ಭಾಗವಹಿಸುವ ಸಲುವಾಗಿ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಯೋಗ ಶಿಕ್ಷಕರಿಂದ ವಿದ್ಯಾರ್ಥಿಗಳು ಹಾಗೂ ನೌಕರರು ಪ್ರತಿದಿನ ಒಂದು ಗಂಟೆ ಯೋಗ ಅಭ್ಯಾಸ ಮಾಡಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: