ಮೈಸೂರು

ಚಾಟ್ ಸೆಂಟರ್ ಆರಂಭಿಸಿ ಹೊಸ ಬದುಕಿಗೆ ನಾಂದಿ ಹಾಕಿದ ಖೈದಿ

whatsapp-image-2016-10-08-at-5-webಪೆರೋಲ್ ಮೇಲೆ ಹೊರ ಬಂದಿರುವ ಖೈದಿಯೊಬ್ಬರು ಆಹಾರ ಮೇಳದಲ್ಲಿ ಚಾಟ್ ಸೆಂಟರ್‍ ತೆರೆದು ಅಚ್ಚರಿ ಮೂಡಿಸಿದ್ದಾರೆ.

11 ವರ್ಷಗಳ ಹಿಂದೆ ದುಡುಕಿ ಮಾಡಿದ ತಪ್ಪಿನಿಂದ ಜೈಲು ಸೇರಿದ್ದ ತೋಂಟದಾರ್ಯ ಎಂಬವರು ಈಗ ಪೆರೋಲ್ ಮೇಲೆ ಬಂದಿದ್ದು, ತಂದೆ-ತಾಯಿಯ ಚಿಕಿತ್ಸೆಗಾಗಿ ‘ಪರಿವರ್ತನಾ’ ಎಂಬ ಹೆಸರಿನಲ್ಲಿ ಚಾಟ್ ಸೆಂಟರ್ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಸ್ಟಾಲ್ ನಂ.28ರಲ್ಲಿ ಗೋಬಿ ಸೆಂಟರ್ ಆರಂಭಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರಾಮದಾಸ್ ಸ್ಫೂರ್ತಿ: ಮಾಜಿ ಸಚಿವ ರಾಮದಾಸ್ ಅವರು ಜೈಲಿಗೆ ಭೇಟಿ ನೀಡಿದ್ದ ಸಂದರ್ಭ ತೋಂಟದಾರ್ಯ ಅವರನ್ನು ಮಾತನಾಡಿಸಿ, ತಂದೆ-ತಾಯಿ ಬಗ್ಗೆ ತಿಳಿಸಿದ್ದೆ. ರಾಮದಾಸ್ ಅವರು ಸಹಾಯ ಮಾಡುತ್ತೇನೆ ಅಂದಾಗ ನಿರಾಕರಿಸಿದಾಗ, ರಾಮದಾಸ್ ಅವರು ಸ್ವಂತ ಕಾಲ ಮೇಲೆ ನಿಂತು ತಂದೆ-ತಾಯಿಯನ್ನು ನೋಡಿಕೊಳ್ಳುವಂತೆ ಬುದ್ಧಿ ಹೇಳಿದ್ದರು. ಅವರ ಬುದ್ಧಿಮಾತಿನ ಮೇರೆಗೆ ಈ ಕೆಲಸ ಆರಂಭಿಸಿದ್ದೇನೆ ಎಂದು ತೋಂಟದಾರ್ಯ ಹೇಳಿದ್ದಾರೆ.

“ನಾನು ಪೆರೋಲ್ ಮೇಲೆ ಹೊರಗೆ ಬಂದಿದ್ದೇನೆ. ತಂದೆ-ತಾಯಿಯ ಅನಾರೋಗ್ಯದ ಕಾರಣಕ್ಕೆ ಕೆಲಸ ಮಾಡುತ್ತಿದ್ದೇನೆ. ನಾನು ಇಲ್ಲಿ ಬಂದಿರೋದು ಜೈಲು ಅಧಿಕಾರಿಗಳಿಗೂ ಗೊತ್ತಿಲ್ಲ. ಯಾರ ಬಳಿಯೂ ಹಣ ಕೇಳಲು ಇಷ್ಟವಿಲ್ಲ. ಹಾಗಾಗಿ ಈ ಕೆಲಸಕ್ಕೆ ಸೇರಿದ್ದೇನೆ” ಎಂದು ತೋಂಟದಾರತ್ಯ ‘ಸಿಟಿ ಟುಡೇ’ಗೆ ತಿಳಿಸಿದ್ದಾರೆ.

ಆಹಾರ ಇಲಾಖೆ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ ಸಿಟಿ ಟುಡೇಯೊಂದಿಗೆ ಮಾತನಾಡಿ, ನಮಗೆ ಇವರು ಖೈದಿ ಎನ್ನುವುದೇ ಗೊತ್ತಿಲ್ಲ. ಇವರು ಮಾಡುತ್ತಿರುವ ಕೆಲಸ ನೋಡಿದರೆ ಖುಷಿಯಾಗುತ್ತದೆ. ಆದರೆ, ಇವರ ಕೆಲಸ ಶ್ಲಾಘನೀಯ. ಆಹಾರವೂ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ಅಪರಾಧ ಮಾಡಿ, ಜೈಲು ಸೇರಿ ಪಾತಾಕಿಗಳಾಗುವವರೇ ಹೆಚ್ಚು. ಇಂತಹವರ ಮಧ್ಯೆ ತೋಂಟದಾರ್ಯ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರಂತೆ ಉಳಿದ ಖೈದಿಗಳೂ ಮನಸ್ಸು ಪರಿವರ್ತನೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಲಿ ಎಂದು ಆಶಿಸೋಣ.

ಸುರೇಶ್ ಎನ್.

 

 

Leave a Reply

comments

Related Articles

error: