ದೇಶಪ್ರಮುಖ ಸುದ್ದಿವಿದೇಶ

ವಾಟ್ಸಪ್ ಬಳಕೆದಾರರಿಗೆ ಖುಷಿ ಸುದ್ದಿ : ಬ್ಲಾಕ್‍ಬೆರ್ರಿ, ನೋಕಿಯಾ ಎಸ್ 40 ಸೇವೆ ಮುಂದುವರಿಕೆ

ಬೆಂಗಳೂರು, ಜೂ.21 : ಬ್ಲಾಕ್ ಬೆರ್ರಿ ಹಾಗೂ ನೋಕಿಯಾ ಎಸ್-40 ಫೋನ್‍ಗಳಲ್ಲೂ ವಾಟ್ಸಪ್ ಸೇವೆ ಮುಂದುವರಿಯಲಿದೆ.

ಜೂನ್ 30 ರ ನಂತರ ಈ ಫೋನ್‍ಗಳಲ್ಲಿ ವಾಟ್ಸ್ ಅಪ್ ಸೇವೆ ಲಭ್ಯವಾಗುವುದಿಲ್ಲ ಈ ಮೊದಲು ವಾಟ್ಸಪ್ ಹೇಳಿತ್ತು. ಇದರಿಂದ ಬ್ಲಾಕ್ ಬೆರ್ರಿ ಹಾಗೂ ನೋಕಿಯಾ ಎಸ್ 40 ಬಳಕೆದಾರರು ಚಿಂತೆಗೀಡಾಗುವಂತೆ ಮಾಡಿತ್ತು.

ಆದರೆ ಕಂಪನಿಯು ಈ ಫೋನ್‍ಗಳಲ್ಲೂ ವಾಟ್ಸಪ್‍ ಸೇವೆಯನ್ನು 2018 ರವರೆಗೆ ಮುಂದುವರಿಸುವುದಾಗಿ ಇದೀಗ ಹೇಳಿದೆ. ಅವಧಿ ವಿಸ್ತರಣೆ ಮಾಡಿರುವುದರಿಂದ ಬಳಕೆದಾರರು ಈ ವರ್ಷದ ಡಿಸೆಂಬರ್ 31 ರ ವರೆಗೂ ಖುಷಿಪಡಬಹುದಾಗಿದೆ.

ವಾಟ್ಸಪ್ ಕಂಪನಿಯಿಂದ ಬ್ಲಾಕ್ ಬೆರ್ರಿ 10 ಹಾಗೂ ಬ್ಲಾಕ್ ಬೆರ್ರಿ ಆಪರೇಟಿಗ್ ಸಿಸ್ಟಂ 7 ಪ್ಲಸ್ ಫೋನ್‍ಗೆ ಸೋಮವಾರ ವಾಟ್ಸಪ್ ಅಪ್ಡೇಟ್ ಬಂದಿದ್ದು ಇದರಲ್ಲಿ ಡಿಸೆಂಬರ್ 31ರವರೆಗೆ ಈ ಫೋನ್ ಗಳಿಗೆ ವಾಟ್ಸ್ ಅಪ್ ಸಪೋರ್ಟ್ ಮಾಡಲಿದೆ ಎಂದು ತಿಳಿಸಲಾಗಿದೆ.

-ಎನ್.ಬಿ.

Leave a Reply

comments

Related Articles

error: