ಕರ್ನಾಟಕ

ಸಾಲದ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು

ರಾಜ್ಯ(ತುಮಕೂರು)ಜೂ.21:-  ಸಾಲದ ಬಾಧೆ ತಾಳಲಾರದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿರಾ ತಾಲೂಕಿನ ದ್ವಾರಾಳು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಚಿಕ್ಕರಾಮಯ್ಯ (70) ಎಂದು ಗುರುತಿಸಲಾಗಿದೆ.  ಇವರು ವ್ಯವಸಾಯದ ಅಭಿವೃದ್ಧಿಗಾಗಿ ತಾವರೆಕೆರೆ ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಆಭರಣ ಒತ್ತೆಯಿಟ್ಟು 3 ಲಕ್ಷ ರೂ. ಸಾಲ ಪಡೆದಿದ್ದರು. ದ್ವಾರಾಳು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 25 ಸಾವಿರ ರೂ., ಮಕ್ಕಳಾದ ರಾಜಶೇಖರ್ ಹಾಗೂ ಲಕ್ಷ್ಮಿಕುಮಾರ್ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರೆನ್ನಲಾಗಿದೆ. ತೋಟಕ್ಕೆ 5 ಕೊಳವೆ ಬಾವಿ ಕೊರೆಸಿದ್ದು 5ರಲ್ಲೂ ಸಹ ನೀರು ಬತ್ತಿ, ತೋಟ ಒಣಗಿದ್ದರಿಂದ ಮಾಡಿದ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಸಂಬಂಧ ತಾವರೇಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: