ದೇಶಪ್ರಮುಖ ಸುದ್ದಿ

ಜಿಎಸ್ಟಿ ಜಾರಿಯಾದ ಬಳಿಕ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ

ನವದೆಹಲಿ, ಜೂ. 21 : ಬರುವ ಜುಲೈ 1 ರಿಂದ ಜಾರಿಯಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ – ಜಿಎಸ್‍ಟಿ ವ್ಯವಸ್ಥೆಯಲ್ಲಿ ಚಿನ್ನದ ಮೇಲೆ ಶೇ. 3ರಷ್ಟು, ರಫ್ ಡೈಮೆಂಡ್ ಗಳ ಮೇಲೆ ಶೇ. 0.25ರಷ್ಟು ಸುಂಕ, ವಜ್ರ ಹಾಗೂ ಇತರೆ ಅಲಂಕಾರಿಗೆ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ ವಿಧಿಸಲಾಗಿದೆ.

ಬಹುಬೇಡಿಕೆಯ ಲೋಹ ಚಿನ್ನದ ಮೇಲೆ ಹೆಚ್ಚು ವಿಧಿಸಿರುವ ಕಾರಣ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಪ್ರಸ್ತುತ ಚಿನ್ನಕ್ಕೆ ಶೇ.2ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್ಟಿ ಜಾರಿಯಾದರೆ ಚಿನ್ನಕ್ಕೆ ಶೇ.3ರಷ್ಟು ತೆರಿಗೆ ವಿಧಿಸಲಾಗಿದೆ. ಜಿಎಸ್ಟಿ ಆಧಾರದಲ್ಲಿ ಚಿನ್ನಕ್ಕೆ ಶೇ. 5ರಷ್ಟು ತೆರಿಗೆ ಹಾಕುವ ಪ್ರಸ್ತಾಪವೂ ಇದೆ. ಇದರಿಂದ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 30 ಸಾವಿರ ರೂ.ನಿಂದ 70 ಸಾವಿರ ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಜಿ.ಎಸ್.ಟಿ. ಅಡಿ ಚಿನ್ನಾಭರಣ ಮೇಕಿಂಗ್ ಚಾರ್ಜ್ ಶೇ. 5 ರಷ್ಟಿದ್ದು, ಇದು ಕೂಡ ಚಿನ್ನಾಭರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಚಿನ್ನಾಭರಣ ವರ್ತಕರ ಒಕ್ಕೂಟ ಒತ್ತಾಯ ಮಾಡಿದೆ.

-ಎನ್.ಬಿ.

Leave a Reply

comments

Related Articles

error: