ದೇಶಪ್ರಮುಖ ಸುದ್ದಿ

ಏರ್ ಇಂಡಿಯಾ ಖರೀದಿಸಲು ಟಾಟಾ ಸಮೂಹ ತಯಾರಿ?

ನವದೆಹಲಿ, ಜೂ. 21 : ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸಮೂಹ ಖರೀದಿಸಲಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಸಿಂಗಪುರ್ ಏರ್‍ಲೈನ್ಸ್ ಸಹಭಾಗಿತ್ವದಲ್ಲಿ ಖರೀದಿ ನಡೆಸಲು ಟಾಟಾ ಸಮೂಹ ಸಿದ್ಧತೆ ನಡೆಸಿದೆ ಎಂಬ ವರದಿಗಳು ಪ್ರಕಟವಾಗಿವೆ. ಒಂದು ವೇಳೆ ಈ ಖರೀದಿ ಸುದ್ದಿ ನಿಜವಾದರೆ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹದ ಒಡೆತನಕ್ಕೆ ಬಂದಂತಾಗುತ್ತದೆ. 1953 ರಲ್ಲಿ ಏರ್ ಇಂಡಿಯಾ ರಾಷ್ಟ್ರೀಕರಣವಾಗುವ ಮುನ್ನ ಟಾಟಾ ಸಮೂಹದ ಒಡೆತನದಲ್ಲೇ ಇತ್ತು.

ಪ್ರಸ್ತುತ ಟಾಟಾ ಸಮೂಹದ ಚೇರ್ಮನ್ ಎನ್.ಚಂದ್ರಶೇಖರನ್ ಅವರು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಏರ್‍ಲೈನ್ಸ್ ಖರೀದಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಕಳೆದೊಂದು ದಶಕದಿಂದ ನಷ್ಟದಲ್ಲಿರುವ ಏರ್‍ಇಂಡಿಯಾವನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರ್ಕಾರ ಮಾತುಕತೆ ನಡೆಸಿತ್ತು. ಅಲ್ಲದೆ ಶೇ.51 ರಷ್ಟು ಪಾಲನ್ನು ಹಂಚಿಕೊಳ್ಳುವುದಾಗಿ ಪ್ರಕಟ ಮಾಡಲಾಗಿತ್ತು.

ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಇತ್ತೀಚೆಗೆ ಹೇಳಿಕೆ ನೀಡಿ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾವನ್ನು ಖಾಸಗೀಕರಣ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದ್ದರು.

-ಎನ್.ಬಿ.

Leave a Reply

comments

Related Articles

error: