ಕರ್ನಾಟಕ

ದ್ವಿಪಥ ರಸ್ತೆಯಾಗಿ ಅಗಲೀಕರಣ : ರಸ್ತೆ ಬದಿ ವ್ಯಾಪಾರಸ್ಥರ ತೆರವು

ರಾಜ್ಯ(ಚಿತ್ರದುರ್ಗ)ಜೂ.21:- ಚಳ್ಳಕೆರೆ  ನಗರದ ಪಾವಗಡ ರಸ್ತೆಯ ಎರಡು ಬದಿಯಲ್ಲಿ ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಲಾಗುತ್ತಿದೆ. ಒಂದು ಕಡೆ ಅಭಿವೃದ್ಧಿಪಡಿಸಿದ್ದು, ಇನ್ನೊಂದು ಬದಿಯಲ್ಲಿ ಅರೆಬರೆಯಾಗಿ ಕಾಮಗಾರಿ ಮಾಡಿ ಕೈ ಬಿಟ್ಟಿರುವ ಕಾರಣ ಫುಟ್‍ಪಾತ್ ವ್ಯಾಪಾರಿಗಳು ರಸ್ತೆಯಲ್ಲೆ ವ್ಯಾಪಾರವನ್ನು ಮಾಡುತ್ತಿರುವುದನ್ನು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಲಾಯಿತು.

ನೆಹರು ವೃತ್ತದಿಂದ ಪಾವಗಡ ರಸ್ತೆಯಲ್ಲಿನ ಗೇಟ್‍ವರೆಗೆ ರಸ್ತೆ ಅಗಲಿಕರಣಕ್ಕೆ ನಗರ ಸಭೆ ವತಿಯಿಂದ ಚಾಲನೆ ನೀಡಲಾಗಿತ್ತು. ನೆಹರು ವೃತ್ತದ ಬಲ ಬದಿಯ ಕಟ್ಟಡ ಮಾಲೀಕರು ಯಾವುದೇ ತಕರಾರು ಮಾಡದೆ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಗಲಿಕರಣಕ್ಕೆ ಅನುವು ಮಾಡಿಕೊಟ್ಟಿದ್ದರು. ರಸ್ತೆಯ ಎಡ ಬದಿಯ ಕೆಲ ಮಳಿಗೆ ಮಾಲೀಕರು ಅಗಲಿಕರಣಕ್ಕೆ ಅಡ್ಡಿ ಉಂಟು ಮಾಡಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದು, ಅರೆಬರೆಯಾಗಿ ಕಟ್ಟಡಗಳನ್ನು ಒಡೆದುಕೊಂಡಿದ್ದು, ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ರಸ್ತೆ ಕಾಮಗಾರಿ ನಡೆಯದಿರುವ ಕಾರಣ ರಸ್ತೆಯಲ್ಲಿ ಸಂಚಾರ ಮಾಡದಂತೆ ರಸ್ತೆಯಲ್ಲಿ ವ್ಯಾಪಾರಿಗಳು ಹಾಗೂ ವಾಹನಗಳು ನಿಲ್ಲುತ್ತಿದ್ದರಿಂದ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಪೊಲೀಸರು ರಸ್ತೆ ಎಡ ಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸಿ ಪಕ್ಕದಲ್ಲಿರುವ ಸಂತೆ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವಾರು ಬೈಕ್,ಕಾರು,ಟ್ರ್ಯಾಕ್ಟರ್, ಟಾಟಾ ಎಸಿ, ಆಟೋ ಮುಂತಾದ ವಾಹನಗಳು ರಸ್ತೆಯಲ್ಲೆ ಪಾರ್ಕಿಂಗ್ ಮಾಡಿಕೊಂಡಿವೆ.  ಪಿಎಸ್‍ಐಗಳಾದ ವೆಂಕಟೇಶ್,ಸತೀಶ್‍ನಾಯ್ಕ ತೆರವುಗೊಳಿಸಿದ್ದಲ್ಲದೆ ಬ್ಯಾರಿಕೇಡ್‍ಗಳನ್ನು ಮಧ್ಯದಲ್ಲಿಡುವುದರ ಮೂಲಕ ರಸ್ತೆಯಲ್ಲಿ ಏಕಮುಖ ಸಂಚಾರವನ್ನು ಮಾಡಿದ್ದರಿಂದ ವಾಹನಗಳು ಯಾವುದೇ ರಸ್ತೆ ದಟ್ಟಣೆಯಿಲ್ಲದೆ ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪಿಎಸ್‍ಐಗಳಾದ ಎನ್.ವೆಂಕಟೇಶ್, ಸತೀಶ್‍ನಾಯ್ಕ,ಎಸ್‍ಐ ಮಹೇಶ್ವರಪ್ಪ, ಪೊಲೀಸ್ ಸಿಬ್ಬಂದಿಗಳಾದ ರೆಹಮನ್, ತಿಪ್ಪೇಸ್ವಾಮಿ, ಮಂಜುನಾಥ್, ರಾಘವೇಂದ್ರ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: