ಕರ್ನಾಟಕಪ್ರಮುಖ ಸುದ್ದಿ

ತಂಬಾಕು ಉತ್ಪನ್ನ ಅಪ್ರಾಪ್ತರಿಗೆ ಮಾರಾಟ : 12594 ಪ್ರಕರಣ ದಾಖಲು

ರಾಜ್ಯ,(ಬೆಂಗಳೂರು)ಜೂ.21:-  ನಗರದಾದ್ಯಂತ ಶಾಲಾ -ಕಾಲೇಜುಗಳ ಬಳಿ ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ  12594 ಪ್ರಕರಣಗಳನ್ನು ಕಳೆದ ಮೇ ತಿಂಗಳ ಅಂತ್ಯದೊಳಗೆ ದಾಖಲಿಸಿರುವ ಸಿಸಿಬಿ ಪೊಲೀಸರು 21,14,820 ರೂ. ದಂಡವನ್ನು ವಸೂಲಿ ಮಾಡಿದ್ದಾರೆ.
ಕಳೆದ 2016 ನೇ ಸಾಲಿನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೋಟಾ ಕಾಯ್ದೆಯಡಿ 12226 ಪ್ರಕರಣಗಳನ್ನು ದಾಖಲಿಸಿ ರೂ.22,64,410 ರೂಗಳ  ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ. ನಗರದ ಶಾಲಾ ಕಾಲೇಜುಗಳ ಬಳಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 145 ಅಂಗಡಿಗಳನ್ನು ಪರಿಶೀಲನೆ ಮಾಡಿ 24 ಪ್ರಕರಣಗಳನ್ನು ದಾಖಲಿಸಿ 25 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಿಂದ 3,86,219 ರೂ ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ 103ಪ್ರಕರಣಗಳಲ್ಲಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: