ಕರ್ನಾಟಕ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನ

ರಾಜ್ಯ(ಕಲಬುರಗಿ)ಜೂ.21:- ಜಿಲ್ಲೆಯ ಆಳಂದ ತಾಲೂಕಿನ ಜಿಡಗಾದ ಸಿದ್ದರಾಮೇಶ್ವರ ಮಠದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಮಾತನಾಡಿ ಮಹಾರಾಷ್ಟ್ರ ರಾಜ್ಯದ ಬೀಡ್ ಜಿಲ್ಲೆಯ ಶಿವಾಜಿ ನಾಮದೇವ ಕಾಳೆ ಮತ್ತು ಶಿವಾಜಿ ವಸಂತ ಕೋಬಾಳೆ ಎಂಬುವವರನ್ನು ಬಂಧಿಸಿ 8.65 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಮೂರ್ತಿ, ಹಿತ್ತಾಳೆ ಸಾಮಾನು ಜಪ್ತಿ ಮಾಡಲಾಗಿದೆ ಎಂದು  ತಿಳಿಸಿದರು.
ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: