ಕರ್ನಾಟಕ

ವಿದ್ಯಾರ್ಥಿಗಳಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಮಡಿಕೇರಿ ಜೂ.21 : ಸ್ಫೋಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನವನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಾಯಿ ಕೇಂದ್ರದ ಸಭಾಂಗಣದಲ್ಲಿ ಕ್ರೀಡಾ ನಿಲಯದ ವಿದ್ಯಾರ್ಥಿನಿಯರಿಗೆ ಯೋಗ ಶಿಕ್ಷಕ ಎಸ್.ಟಿ.ವೇಂಕಟೇಶ್ ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಯೋಗಿಕವಾಗಿ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸ ಮಾಡಿಸಿದರು.

ಕಾರ್ಯಕ್ರಮದಲ್ಲಿ ಸಾಯಿ ಕೇಂದ್ರದ ಸಹಾಯಕ ನಿರ್ದೇಶಕ  ರವಿ, ಅಥ್ಲೆಟಿಕ್ಸ್ ತರಬೇತುದಾರ  ಉಮೇಶ್, ಹಾಕಿ ತರಬೇತುದಾರರಾದ ವಿವೇಕ್ ಚತುರ್ವೇದಿ, ಸಾಹಿರಾಭಾನು, ವಾಂಡರರ್ಸ್ ಕ್ಲಬ್‍ನ ಮುಖ್ಯಸ್ಥರಾದ ಬಾಬು ಸೋಮಯ್ಯ, ಶ್ಯಾಂಪೂಣಚ್ಚ, ಕೋಟೇರ ಮುದ್ದಯ್ಯ, ಕಿಶನ್ ಪೂವಯ್ಯ ಹಾಗೂ ತಿಲಕ್ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: