ಮೈಸೂರು

ಹೊಸ ತಂತ್ರಜ್ಞಾನಗಳ ಕುರಿತು ಕಾರ್ಯಾಗಾರ ಆಯೋಜಿಸಬೇಕು: ಮಂಜುನಾಥ್

ಮೈಸೂರು, ಜೂ.೨೧: ವಿವಿಗಳ ಸಂಶೋಧನೆಯ ಫಲ ಕೃಷಿಕರಿಗೆ ತಲುಪಲು ಹಾಗೂ ಹೊಸ ತಾಂತ್ರಿಕತೆಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಕಾರ್ಯಾಗಾರಗಳು ನಡೆಯಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ್ ತಿಳಿಸಿದರು.
ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಿದ್ದ ೨೦೧೭-೧೮ನೇ ಸಾಲಿನ ಮೊದಲ ತ್ರೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಾಗಾರಗಳಲ್ಲಿ ವಿಚಾರ ವಿನಿಮಯ ಮಾಡಿಕೊಂಡು ರೈತರಿಗೆ ತಲುಪಿಸಬಹುದು ಎಂದ ಅವರು, ಜಿಲ್ಲೆಯ ಪ್ರಸ್ತುತ ತೋಟಗಾರಿಕೆಯ ವಸ್ತು ಸ್ಥಿತಿ ವಿವರಿಸಿದರು.
ಮಹಾವಿದ್ಯಾಲಯದ ಡೀನ್ ಡಾ.ಇಂದಿರೇಶ್ ಮಾತನಾಡಿ, ಇಲಾಖೆ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಜೊತೆಗೂಡಿ ಕೆಲಸ ಮಾಡಿದರೆ ರೈತರಿಗೆ ಹೆಚ್ಚಿನ ತಾಂತ್ರಿಕ ನೆರವಾಗಿ ಅವರ ಆರ್ಥಿಕ ಸುಧಾರಣೆ ಸಾಧ್ಯ ಎಂದರಲ್ಲದೆ ವಿಜ್ಞಾನಿಗಳು ಹಾಗೂ ವಿಸ್ತರಣಾಧಿಕಾರಿಗಳು ಕ್ಷೇತ್ರ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಸಂಪರ್ಕದಲ್ಲಿರುವುದು ಅವಶ್ಯವೆಂದರು.
ಕಾರ್ಯಕ್ರಮದಲ್ಲಿ ಡಾ.ತಮ್ಮಯ್ಯ, ಪಾಲಿಹೌಸ್ ಕೃಷಿಕ ಶ್ರೀನಿವಾಸ್, ಡಾ.ಯತೀಂದ್ರ, ಡಾ.ರಾಜೇಶ್ವರಿ, ಡಾ.ಮುತ್ತುರಾಜು, ವಿಸ್ತರಣಾ ಮುಂದಾಳು ಹರೀಶ್.ಬಿ.ಎಸ್, ಡಾ.ಯತೀಂದ್ರ, ಡಾ. ಮುತ್ತುರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: