ಕರ್ನಾಟಕಪ್ರಮುಖ ಸುದ್ದಿ

2011ರಲ್ಲಿ ಕೆಪಿಎಸ್ಸಿ ಮಾಡಿದ್ದ ನೇಮಕಾತಿಗೆ ಹೈಕೋರ್ಟ್ ತಡೆ

ಬೆಂಗಳೂರು, ಜೂ. 21 : ಕೆಪಿಎಸ್ಸಿ 2011 ರಲ್ಲಿ ಮಾಡಿದ್ದ ನೇಮಕಾತಿಗಳನ್ನು ರದ್ದುಗೊಳಿಸಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.

ಇದರಿಂದ 2011ರಲ್ಲಿ ನೇಮಕ ಪಡೆದಿದ್ದವರಿಗ ಭಾರೀ ನಿರಾಸೆಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯಲ್ಲಿ 362 ತೇರ್ಗಡೆ ಹೊಂದಿ ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದರು.  ಈ ಆಯ್ಕೆ ಪಟ್ಟಿಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಈ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ – ಕೆಎಟಿ 2016 ರಲ್ಲಿ ರದ್ದುಗೊಳಿಸಿತ್ತು.

ಇಂದು ವಿಚಾರಣೆಗೆ ಬಂದ ಈ ಪ್ರಕರಣದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಮುಂದಿನ ಆದೇಶದವರೆಗೂ ನೇಮಕಾತಿ ಆದೇಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

-ಎನ್.ಬಿ.

Leave a Reply

comments

Related Articles

error: