ಮನರಂಜನೆಲೈಫ್ & ಸ್ಟೈಲ್

ಯೋಗಕ್ಕೆ ಜೀವನದಲ್ಲಿ ಮಹತ್ವದ ಸ್ಥಾನವನ್ನು ನೀಡಿದ್ದಾರಂತೆ ಈ ಬೆಡಗಿಯರು

ದೇಶ(ಮುಂಬೈ)ಜೂ.21:- ಜೂ.21 ವಿಶ್ವಯೋಗದಿನಾಚರಣೆಯನ್ನು 180 ದೇಶಗಳಲ್ಲಿ ಆಚರಿಸಲಾಯಿತು. ಯೋಗವು ಬಾಲಿವುಡ್ ನ ನಟಿಯರಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆಯಂತೆ.   ಯಾವ ನಟಿಯರ ಜೀವನದಲ್ಲಿ ಯೋಗ ಮಹತ್ವದ ಪಾತ್ರ ಪಡೆದಿದೆ ಎಂಬುದನ್ನು ಕೆಲವು ಮ್ಯಾಗಜೀನ್ ಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಶಿಲ್ಪಾಶೆಟ್ಟಿ ಕುಂದ್ರಾ, ಮಲೈಕಾ ಅರೋರಾ, ಕರೀನಾ, ಅಲಿಯಾ ವರೆಗಿನ ಸರಿ ಸುಮಾರು ಎಲ್ಲ ನಟಿಯರೂ ಜಿಮ್ ಜೊತೆ ಜೊತೆಯಲ್ಲಿ ಯೋಗಕ್ಕೂ ಮಹತ್ವ ನೀಡಿದ್ದಾರೆ. ಬಾಲಿವುಡ್ ನ ಹತ್ತು ಚೆಂದುಳ್ಳಿ ಚೆಲುವೆಯರು ಯೋಗಕ್ಕೆ ಮಹತ್ವದ ಸ್ಥಾನವನ್ನು ನೀಡಿದ್ದಾರಂತೆ.

ಶಿಲ್ಪಾ ಶೆಟ್ಟಿ ಕುಂದ್ರಾ: ತನ್ನ ಜೀವನದಲ್ಲಿ ಯೋಗಕ್ಕೆ ಸಾಕಷ್ಟು ಮಹತ್ವ ನೀಡುತ್ತಾಳಂತೆ. ಯೋಗಗುರು ಬಾಬಾ ರಾಮ್ ದೇವ್ ಜೊತೆ ಈಗಾಗಲೇ ಯೋಗ ಕುರಿತು ವೇದಿಕೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾರ್ಕೆಟ್ ನಲ್ಲಿ ಅವರ ವಿವಿಧ ಭಂಗಿಯ ಯೋಗ ಸಿಡಿಗಳು ಲಭ್ಯವಿದೆ.

ಮಲೈಕಾ ಅರೋರಾ: 43 ವರ್ಷವಾದರೂ ಗ್ಲಾಮರೆಸ್ ಆಗಿ ಕಾಣಿಸುತ್ತಾಳೆ. ಅವಳ ಸೌಂದರ್ಯದ ಗುಟ್ಟು ಯೋಗದಲ್ಲಿ ಅಡಗಿದೆಯಂತೆ. 29ವರ್ಷದಲ್ಲಿ ತಾಯಿಯಾದ ನಂತರ ದೇಹವನ್ನಾವರಿಸಿದ್ದ ಬೊಜ್ಜನ್ನು ಯೋಗದಿಂದ ಕರಗಿಸಿದ್ದಾಳಂತೆ.

ಕರೀನಾ ಕಪೂರ್ ಖಾನ್: ಈ ಬೆಡಗಿಯೂ ಕೂಡ ತೈಮೂರ್ ಜನ್ಮದ ನಂತರ ಯೋಗದಿಂದಲೇ ತೂಕ ಇಳಿಸಿಕೊಂಡಿದ್ದಾಳಂತೆ.

ದೀಪಿಕಾ ಪಡುಕೋಣೆ: ಈ ಬ್ಯೂಟಿಯ  ಪ್ರತಿದಿನದ  ಒಂದು ಭಾಗ ಯೋಗವಂತೆ. ಖಿನ್ನತೆಯಿಂದ ಬಳಲುತ್ತಿದ್ದಾಗ ಮತ್ತೆ ಆರೋಗ್ಯಯುತ ಜೀವನಕ್ಕೆ ಈಕೆಯನ್ನು ಕರೆತಂದಿದ್ದು ಯೋಗವಂತೆ.

ಬಿಪಾಶಾ ಬಸು : ಫಿಟ್ ನೆಸ್ ಕುರಿತು ಹೆಚ್ಚಿನ ಗಮನ ಹರಿಸುವ ಈ ಬೆಡಗಿ ಜಿಮ್ ಗೂ ಹೋಗುವುದರ ಜೊತೆ ಯೋಗವನ್ನೂ ಮಾಡುತ್ತಾಳಂತೆ. ಈಕೆಯ ಯೋಗದ ವಿವಿಧ ಭಂಗಿಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ.

ಸೋನಮ್ ಕಪೂರ್: ಸೋನಂ ಕಪೂರ್ ಬಾಲಿವುಡ್ ಪ್ರವೇಶಿಸುವುದಕ್ಕೂ ಮೊದಲು ಸ್ವಲ್ಪ ಬೊಜ್ಜಿನ ಶರೀರ ಹೊಂದಿದ್ದಳು. ಇದರಿಂದ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ತೂಕವನ್ನು ಇಳಿಸಿಕೊಂಡಿದ್ದಾಳಂತೆ. ಈಗಲೂ ಪ್ರತಿದಿನ ಯೋಗ ಮಾಡುತ್ತಾಳಂತೆ.

ಜ್ಯಾಕಲೀನ್ ಫರ್ನಾಂಡೀಸ್ : ಈ ಬೆಡಗಿಯೂ ತಾನೇನೂ ಕಡಿಮೆ ಇಲ್ಲ ಎಂಬಂತೆ ಫಿಟ್ ನೆಸ್ ಕಡೆ ಹೆಚ್ಚಿನ ಗಮನ ನೀಡಿದ್ದಾಳಂತೆ. ಜಿಮ್ ಮತ್ತು ಯೋಗ ಎರಡಕ್ಕೂ ಮಹತ್ವ ನೀಡಿದ್ದಾಳಂತೆ.

ಲಾರಾದತ್ತಾ: ಲಾರಾದತ್ತಾ ಗರ್ಭಿಣಿಯಾದ ಸಮಯದಲ್ಲಿ ಹೆಚ್ಚಿದ ತೂಕವನ್ನು ಇಳಿಸಲು ಯೋಗದ ಸಹಾಯ ಪಡೆದಿದ್ದಾಳಂತೆ.

ಕಂಗನಾ ರಾಣಾವತ್ : ಕಂಗನಾ ಫಿಟ್ ಇರಲು ನಿಯಮಿತವಾಗಿ ವರ್ಕೌಟ್ ಮಾಡುತ್ತಾಳಂತೆ. ಪ್ರತಿದಿನ ಯೋಗ ಮಾಡುವ ಈಕೆ ಯೋಗವನ್ನು ಜೀವನದ ಒಂದು ಭಾಗವೆಂದೇ ತಿಳಿದಿದ್ದಾಳಂತೆ.

ನರ್ಗೀಸ್ ಫಾಕ್ರಿ: ಈಕೆ ಭಾರತದ ಹೊರಗಿದ್ದರೂ, ಹಿಂದಿ ಮಾತನಾಡಲು ಕಷ್ಟಪಟ್ಟರೂ ದಿನಾಲೂ ಯೋಗವನ್ನು ಮಾಡಲು ಮಾತ್ರ ಮರೆಯುವುದಿಲ್ಲವಂತೆ. ಒಟ್ಟಿನಲ್ಲಿ ಯೋಗ ಎಲ್ಲರ ಆರೋಗ್ಯಗಳಿಗೂ ಮೂಲವಾಗಿದ್ದು ಜೀವನದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎನ್ನುತ್ತಾರೆ ಬಳುಕುವ ಬಳ್ಳಿಯಂತಿರುವ ಈ ಬೆಡಗಿಯರು.  (ಎಸ್.ಎಚ್)

Leave a Reply

comments

Related Articles

error: