ಮೈಸೂರು

ಜೂಜಾಟ: ೮ ಮಂದಿ ಬಂಧನ

ಮೈಸೂರು, ಜೂ.೨೧: ನಗರ ಸಿಸಿಬಿ ಮತ್ತು ಕೃಷ್ಣರಾಜ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿ ೮ ಜನರನ್ನು ಬಂಧಿಸಿದ್ದಾರೆ.
ಕೆ.ಆರ್. ನಂದಕುಮಾರ್, ಮಹದೇವಸ್ವಾಮಿ, ಶ್ರೀನಿವಾಸ.ಎಸ್, ಅನಂತು.ಜಿ, ರಂಗಸ್ವಾಮಿ, ಸಿದ್ದನಾಯ್ಕ್, ಬಸವರಾಜು, ಸ್ವಾಮಿ ಬಂಧಿತರು. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಮೊಹಲ್ಲಾದ ಹೆಚ್.ಜಿ.ರಸ್ತೆಯ ಆರ್‍ಯ ವೈಶ್ಯ ಕರ್ಮ ಶಾಲೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ಮಾಡಿ ಇಸ್ಪೀಟ್ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರನ್ನು ಬಂಧಿಸಿ ಜೂಜಾಟಕ್ಕೆ ಪಣವಾಗಿಟ್ಟಿದ್ದ ೧೭,೭೦೦ ರೂ ನಗದು, ೭ ಮೊಬೈಲ್ ಫೋನ್ ಮತ್ತು ಇತರೇ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: