ಕರ್ನಾಟಕಪ್ರಮುಖ ಸುದ್ದಿ

ಶಾಸಕರ ವಿರುದ್ಧ ಅವಹೇಳನಕಾರಿ ವರದಿ : ಪತ್ರಿಕಾ ಸಂಪಾದಕಗೆ ಒಂದು ವರ್ಷ ಜೈಲು

ಬೆಂಗಳೂರು, ಜೂ.21 : ‘ಯಲಹಂಕ ವಾಯ್ಸ್’ ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಅವರಿಗೆ ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ್ದಾರೆ.

ತಮ್ಮ ವಿರುದ್ಧ ಅವಹೇಳನಕಾರಿಯಾಗಿ ವರದಿ ಪ್ರಕಟಿಸಲಾಗಿದೆ ಎಂದು ಹಕ್ಕುಬಾಧ್ಯತೆ ಸಮಿತಿಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ದೂರು ನೀಡಿದ್ದರು.

ಹಕ್ಕುಬಾಧ್ಯತೆ ಸಮಿತಿಯ ತನಿಖೆ ವೇಳೆ ಪತ್ರಿಕೆಯಲ್ಲಿ ಎಸ್.ಆರ್. ವಿಶ್ಬನಾಥ್ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಆಧಾರ ರಹಿತ ವರದಿ ಪ್ರಕಟವಾಗಿರುವುದು ಸಾಬೀತಾದ ಹಿನ್ನೆಲೆಯುಲ್ಲಿ ಒಂದು ವರ್ಷ ಜೈಲು ಹಾಗು ಹತ್ತು ಸಾವಿರ ರೂ ದಂಡ ವಿಧಿಸಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಆದೇಶ ನೀಡಿದ್ದಾರೆ.

ವಿಧಾನಸಭೆಯಲ್ಲಿ ಚರ್ಚೆಯಾದ ನಂತರ ಸಂಪದಾಕ ಅನಿಲ್ ರಾಜ್ ಅವರಿಗೆ ಶಿಕ್ಷೆ ನೀಡುವ ಬಗ್ಗೆ ಸರ್ವಾನುಮತದಿಂದ ಸದಸ್ಯರು ಒಪ್ಪಿಗೆ ನೀಡಿದರು. ಶಿಕ್ಷೆಯ ಪ್ರಮಾಣದ ಬಗ್ಗೆ ಸಮಿತಿ ಶಿಫಾರಸ್ಸು ಮಾಡಿತ್ತು.

-ಎಸ್.ಎನ್/ಎನ್.ಬಿ.

Leave a Reply

comments

Related Articles

error: