ಮೈಸೂರು

ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ : ಡಾ.ಬಿ.ಮಂಜುನಾಥ್ ಒತ್ತಾಯ

ಮೈಸೂರು,ಜೂ.21:-  ರಾಜ್ಯ ಸರ್ಕಾರವು ರೈತರ  8,400 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿರುವುದನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸುತ್ತದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು  ರೈತ ನಾಯಕ  ಬಿ.ಎಸ್. ಯಡಿಯೂರಪ್ಪನವರು ಕಳೆದ 1ವರ್ಷದಿಂದ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ  ಜನಸಂಪರ್ಕ ಅಭಿಯಾನದ ಮೂಲಕ  ರೈತರ ಪರ ದನಿಯೆತ್ತಿ  ಬರಗಾಲದಿಂದ ತತ್ತರಿಸಿ ಕಂಗಲಾಗಿದ್ದ ರೈತರ ಸಾಲ ಮನ್ನಾ  ಮಾಡಿ ಎಂದು ಹೇಳುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.   ಆದರೆ ರಾಜ್ಯ ಸರ್ಕಾರಕ್ಕೆ 1.50 ಲಕ್ಷ ಸಾಲ ಇರುವ ರೈತರ ಸಾಲ ಮನ್ನಾ ಮಾಡಲು ನಮ್ಮ ಬೇಡಿಕೆ ಇದ್ದದ್ದು ಆದರೇ ರಾಜ್ಯ ಸರ್ಕಾರ ಕೇವಲ ಸಹಕಾರ ಬ್ಯಾಂಕಿನಲ್ಲಿ   ಸಣ್ಣ ಇಳುವರಿದಾರರ ಸಾಲ ಮನ್ನಾ ಮಾಡಿರುವುದು ಮೂಗಿಗೆ ತುಪ್ಪ ಸವರಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.   ಪಂಜಾಬ್‍ನಲ್ಲಿ ಇತ್ತೀಚಿಗೆ  20ಸಾವಿರ ಕೋಟಿಗೂ ಹೆಚ್ಚು , ಉತ್ತರ ಪ್ರದೇಶ-36 ಸಾವಿರ ಕೋಟಿ,  ಮಹಾರಾಷ್ಟ್ರದಲ್ಲಿ  35ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ, ಆದರೆ  ರಾಜ್ಯದಲ್ಲೂ ಸಹ ರೈತರು ಸತತ ಮೂರು ವರ್ಷಗಳ ಬರಗಾಲದಿಂದ ಶೋಚನೀಯ ಸ್ಥಿತಿ ತಲುಪಿದ್ದು ಸುಮಾರು 1500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಇಂತಹ ಪರಿಸ್ಥಿಯಲ್ಲಿ  ನಮ್ಮ ರಾಜ್ಯ ಕಾಂಗ್ರೆಸ್  ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಬಿಜೆಪಿಯು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹ ಪಡಿಸುತ್ತದೆ ಹಾಗೂ ಉಳಿದ ಸಾಲ ಮನ್ನಾ ಮಾಡುವರೆಗೂ  ನಮ್ಮ  ಹೋರಾಟ ಮುಂದುವರೆಯುತ್ತದೆ  ಎಂದು ಸ್ಪಷ್ಟಪಡಿಸಿದರು.
ನಂತರ ಮಾತಾನಾಡಿದ ವಿಜಯಶಂಕರ್ ಕಳೆದ 3 ವರ್ಷದಿಂದ ಬರಗಾಲಕ್ಕೆ ರೈತರು ತತ್ತರಿಸಿ ಬೆಳೆ ಕೈಗೆ ಸಿಗದೆ   ಬೆಳದ ಬೆಳೆಗೆ  ಸರಿಯಾದ ಬೆಲೆ ಸಿಗದೇ ಕಂಗಟ್ಟಿದ್ದಾರೆ  ಎಂದೂ  ಕಂಡಿರದ ಭೀಕರ ಬರಗಾಲವನ್ನು ರಾಜ್ಯ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಹಕಾರಿ ಬ್ಯಾಂಕ್,  ಗ್ರಾಮೀಣ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಎಂದು ಭೇದಬಾವ ಮಾಡುತ್ತಿದ್ದು ಎಲ್ಲಾ ಬ್ಯಾಂಕಿನಲ್ಲೂ ರೈತರೇ ಸಾಲ ಮಾಡಿರುವುದು ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡಿಲ್ಲ ಎಂದು ನುಡಿದರು.  ನಂತರ ಮಾತಾನಾಡಿದ ಅವರು  ರೈತಾ ಮೋರ್ಚಾದಿಂದ ನಾವು ಹೋರಾಟ ಮುಂದುವರೆಸುತ್ತೇವೆ  ಯಡಿಯೂರಪ್ಪನವರಿಗೆ ಬೆಚ್ಚಿ  ಸಾಲ ಮಾಡಿದ್ದಾರೆ ಆದರೆ ನಮ್ಮ ಬೇಡಿಕೆ ಈಡೇರಿಲ್ಲ ಯಾವ ಮಾನದಂಡವನ್ನು ಇಟ್ಟಕೊಂಡು ರೈತರ  ಮೂಗಿಗೆ ತುಪ್ಪ ಹಚ್ಚುವಂತೆ ಸಾಲ ಮನ್ನಾ ಮಾಡಿದ್ದಾರೋ ಎಂದು ಗುಡುಗಿದರು.   ಸಂಪೂರ್ಣ ಸಾಲ ಮನ್ನಾ ಮಾಡುವವರೆಗೂ ಬಿಜೆಪಿ ರೈತಾ ಮೋರ್ಚಾ ತನ್ನ ಹೋರಾಟ ಮುಂದುವರೆಸುತ್ತದೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ವಿ.ರಾಜೀವ್,  ಮೈ.ಪು.ರಾಜೇಶ್, ಮುಖಂಡರಾದ  ಮಲ್ಲಪ್ಪಗೌಡ,  ಮಾದೇಶರವ, ನಗರ ಮಾಧ್ಯಮ ಪ್ರಮುಖ್ ಮಹೇಶ್ ರಾಜೇ ಅರಸ್,  ಪ್ರಭಾಕರ್ ಸಿಂದೆ ಹಾಜರಿದ್ದರು.    (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: