ದೇಶಪ್ರಮುಖ ಸುದ್ದಿ

ರಾಜೀವ್ ಗಾಂಧಿ ಹಂತಕನಿಂದ ದಯಾ ಮರಣಕ್ಕೆ ಅರ್ಜಿ

ಚೆನ್ನೈ, ಜೂ. 21 : ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಪೈಕಿ ರಾಬರ್ಟ್ ಪಯಸ್ ಎಂಬ ವ್ಯಕ್ತಿಯು ದಯಾ ಮರಣ ಕೋರಿ ತಮಿಳುನಾಡು ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಜೀವನಪೂರ್ತಿ ಜೈಲಿನಲ್ಲಿ ಕಳೆಯುವ ಬದಲಿಗೆ ದಯಾ ಮರಣ ನೀಡುವಂತೆ ಆತ ಮೂರು ಪುಟಗಳ ಪತ್ರದಲ್ಲಿ ಆತ ಮನವಿ ಮಾಡಿಕೊಂಡಿದ್ದಾನೆ.

ಮೂರು ವರ್ಷದ ಹಿಂದೆ ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಮ್ಮ ಬಿಡುಗಡೆಗಾಗಿ ಪ್ರಯತ್ನ ಮಾಡಿದ್ದರು. ಆದರೆ ನಂತರ ಬಂದ ಸರ್ಕಾರ ಈ ಬಗ್ಗೆ ಕ್ರಮ ವಹಿಸಿಲ್ಲ. ಜೀವನಪೂರ್ತಿ ಜೈಲಿನಲ್ಲಿ ಕಳೆಯಲಿ ಎಂಬುದು ಸರಕಾರದ ಅಪೇಕ್ಷೆ ಇರಬಹುದು. ಇದು ನನಗೆ ಮಾತ್ರವಲ್ಲ, ನನ್ನ ಕುಟುಂಬದ ಮೇಲೂ ಪರಿಣಾಮ ಬೀರಿದೆ ಎಂದಿದ್ದಾನೆ.

ಹೀಗಾಗಿ ನನಗೆ ದಯಾ ಮರಣ ನೀಡಿ ಎಂದು ಆತ ಕೇಳಿಕೊಂಡಿದ್ದಾನೆ.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಸಾಂವಿಧಾನಿಕ ಪೀಠವು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ರಾಜೀವ್ ಗಾಂಧಿ ಹಂತಕರ ಶಿಕ್ಷೆ ಮರುಪರಿಶೀಲನೆ ಅರ್ಜಿಯನ್ನು ಕಳೆದ ಫೆಬ್ರವರಿಯಲ್ಲಿ ತಿರಸ್ಕರಿದ್ದನ್ನು ಇಲ್ಲಿ ಸ್ಮರಿಸಬಹುದು.

-ಎನ್.ಬಿ.

Leave a Reply

comments

Related Articles

error: