ಪ್ರಮುಖ ಸುದ್ದಿ

7 ಮಂದಿ ಗಂಧದಮರಗಳ್ಳರ ಬಂಧನ: 30 ಕೆಜಿ ಗಂಧದ ತುಂಡುಗಳ ವಶ

ಪ್ರಮುಖ ಸುದ್ದಿ, ಹಲಗೂರು, ಜೂ.21: ಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ 7 ಮಂದಿ ಮರಗಳ್ಳರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಧನಗೂರು ಮೀಸಲು ಅರಣ್ಯ ಪ್ರದೇಶದ ಸಾಲು ಹುಣಸೆ ಮರದ ಸ್ಥಳದಲ್ಲಿ ಗಂಧದ ಮರಗಳನ್ನು ಸಾಗಿಸುತ್ತಿದ್ದ ಕುಮಾರ, ಮಾದೇಶ, ಚಂದ್ರು, ರಜನಿ, ರಮೇಶ, ರವಿ, ಚೆನ್ನಪ್ಪ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರು ಧನಗೂರು ಮೀಸಲು ಅರಣ್ಯ ಪ್ರದೇಶದಲ್ಲಿ ಗಂಧದ ಮರಗಳನ್ನು ಕಡಿಯುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಮರಗಳ ಸಮೇತ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ಬಳಿಯಿದ್ದ ಮಚ್ಚುಗಳು, ಗರಗಸ ಮತ್ತು ಸುಮಾರು 30 ಕೆಜಿ ಗಂಧದ ಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: