ಕರ್ನಾಟಕಪ್ರಮುಖ ಸುದ್ದಿ

ಸ್ನೇಹಿತನ ಪತ್ನಿಯ ಮೇಲೆ ಕಾಮದ ಕಣ್ಣು : ಮಹಿಳೆಯಿಂದಲೇ ಗೂಸಾ

ರಾಜ್ಯ(ತುಮಕೂರು)ಜೂ.22:-  ಸ್ನೇಹಿತನ ಪತ್ನಿಯ ಮೇಲೆ ಕಾಮದ ಕಣ್ಣು ಹಾಕಿದ ವ್ಯಕ್ತಿಯೊಬ್ಬ ಆ ಮಹಿಳೆಯಿಂದಲೇ ಗೂಸಾ ತಿಂದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕೋಟೆ ಬೀದಿ ನಿವಾಸಿ ರಮೇಶ್ ಎಂಬ ವ್ಯಕ್ತಿ ತನ್ನ ಸ್ನೇಹಿತ ಮನೆಯಲ್ಲಿ ಇರದ ಸಂದರ್ಭದಲ್ಲಿ ಮನೆಗೆ ಹೋಗಿ ಸ್ನೇಹಿತನ ಹೆಂಡತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಆಕೆಗೆ ದುಡ್ಡಿನ ಆಸೆ ತೋರಿಸಿ ಅಶ್ಲೀಲವಾಗಿ ನಡೆದುಕೊಂಡಿದ್ದ. ಇದಕ್ಕೆ ಆ ಮಹಿಳೆ ಪ್ರತಿರೋಧಿಸಿದಾಗ ಜಗಳವಾಗಿ ಓಡಿ ಹೋಗಿದ್ದ. ಗುರುವಾರ ಕಾಮುಕ ರಮೇಶನನ್ನು ಹುಡುಕಿ ಸಖತ್ ಗೂಸಾ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: