ಪ್ರಮುಖ ಸುದ್ದಿ

ಸೇನಾ ಎನ್ ಕೌಂಟರ್ ಗೆ ಮೂವರು ಲಷ್ಕರ್ ಉಗ್ರರು ಬಲಿ

ಪ್ರಮುಖ ಸುದ್ದಿ, ಶ್ರೀನಗರ, ಜೂ.22: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಭಾರತೀಯ ಸೇನೆ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆಗೈದಿದೆ.

ಮೃತ ಉಗ್ರರನ್ನು ಲಷ್ಕರ್ ಸಂಘಟನೆಯ ಮಜೀದ್ ಮೀರ್, ಶರೀಖ್ ಅಹ್ಮಮದ್ ಮತ್ತು ಇರ್ಷಾದ್ ಅಹ್ಮದ್ ಎಂದು ಗುರುತಿಸಲಾಗಿದೆ. ಪುಲ್ವಾಮದ ಕಾಕ್ಪೋರಾದಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದು ಸೇನೆ ದಾಳಿ ನಡೆಸಿದೆ. ಈ ವೇಳೆ ಉಗ್ರರು ಪ್ರತಿದಾಳಿ ನಡೆಸಿದ್ದು ಎನ್ ಕೌಂಟರ್ ಗೆ ಮೂವರು ಉಗ್ರರು ಉಗ್ರರು ಬಲಿಯಾಗಿದ್ದಾರೆ. ಉಗ್ರರಿಂದ 3 ಎಕೆ 47 ಬಂದೂಕು ಮತ್ತು ಭಾರಿ ಪ್ರಮಾಣದ ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನು ಘಟನೆಯಲ್ಲಿ  ಭಾರತೀಯ ಸೇನೆಯ 50 ರಾಷ್ಟ್ರೀಯ ರೈಫಲ್ಸ್ ದಳದ ಓರ್ವ ಯೋಧ ಗಾಯಗೊಂಡಿದ್ದು, ಗಾಯಾಳು ಸೈನಿಕನನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೊಂದೆಡೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ. ಗಡಿ ನಿಯಂತ್ರಣ ರೇಖೆ ಬಳಿಯ ಪಲನ್ ವಾಲಾ ಬಳಿ ಎಕೆ 47 ಬಂದೂಕು ಸಹಿತ ಉಗ್ರರು ಗಡೆಯೊಳಗೆ ಒಳ ನುಸುಳಲು ಯತ್ನಿಸಿದ್ದು, ಈ ವೇಳೆ ದಾಳಿ ಮಾಡಿದ ಸೇನೆ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದೆ. ಸೇನೆ  ದಾಳಿ ಮಾಡುತ್ತಿದ್ದಂತೆಯೇ ಉಗ್ರರು ತಮ್ಮ ಶಸ್ತ್ರಾಸ್ತ್ರದಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: