ಪ್ರಮುಖ ಸುದ್ದಿ

ಬಣ್ಣಹಚ್ಚಿ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ ಸಿಎಂ ಸಿದ್ದರಾಮಯ್ಯ

 

ಪ್ರಮುಖ ಸುದ್ದಿ, ಬೆಂಗಳೂರು, ಜೂ.22: ರಾಜಕೀಯದಲ್ಲಿ ತಮ್ಮ ವಿಶಿಷ್ಟ ವಾಕ್ಚಾತುರ್ಯ, ಹಾಸ್ಯ ಪ್ರವೃತ್ತಿ ಹಾಗೂ ವರ್ಚಸ್ಸಿನಿಂದ ಹೆಸರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯದಾಚೆಗೂ ಛಾಪು ಮೂಡಿಸಲು ಹೊರಟಿದ್ದು ಸದ್ಯದಲ್ಲೆ ಸಿನಿಮಾಗಾಗಿ ಬಣ್ಣಹಚ್ಚಿ ಬೆಳ್ಳಿತೆರಯ ಮೇಲೆ ಮಿಂಚಲಿದ್ದಾರೆ.

ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ತಮ್ಮ ಹೆಗಲ ಮೇಲಿದ್ದರೂ ಬಿಡುವು ಮಾಡಿಕೊಂಡು ಕವಿತಾ ಲಂಕೇಶ್ ನಿರ್ದೇಶಿಸುತ್ತಿರುವ ಕನ್ನಡ, ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವ ಸಮ್ಮರ್‌ ಹಾಲಿಡೇಸ್‌  ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ. ಅಕ್ಟೋಬರ್ ವೇಳೆಗೆ ಚಿತ್ರ ತೆರೆ ಕಾಣಲಿದ್ದು, 10 ನಿಮಿಷ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗುವ ಮಕ್ಕಳು ನೆರವು ಕೋರಿ ಮುಖ್ಯಮಂತ್ರಿಗೆ ಮನವಿ ಮಾಡುತ್ತಾರೆ. ಮಕ್ಕಳಿಗೆ ಸಹಾಯ ನೀಡುವ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮಕ್ಕಳಿಗೆ ಪಾಠ ಪ್ರವಚನವೆಂದರೆ ಕಷ್ಟ, ಆಟಪಾಠವೆಂದರೆ ಇಷ್ಟ. ಹಾಗಾಗಿಯೇ ಮನರಂಜನೆಯ ಮೂಲಕ ಮಕ್ಕಳಿಗೆ ಉತ್ತಮ ಸಂದೇಶವನ್ನು ತಿಳಿಸುವ ಚಿತ್ರ ಇದಾಗಿದೆ. ಚಿತ್ರದಲ್ಲಿ ಕವಿತಾ ಲಂಕೇಶ್ ಮಗಳು ಈಶ ಹಾಗೂ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜಕೀಯ ವಿಶಿಷ್ಟ ಛಾಪು ಮೂಡಿಸಿರುವ ಸಿದ್ದರಾಮಯ್ಯ ಬಣ್ಣಹಚ್ಚಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡು ಮತ್ತೊಂದು ಸಾಧನೆ ಮಾಡಲಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: