ದೇಶಪ್ರಮುಖ ಸುದ್ದಿ

ಕಾಶ್ಮೀರ : ಎನ್‍ಕೌಂಟರ್‍ ನಡೆಸಿ ಮೂವರು ಉಗ್ರರ ಸೆದೆಬಡಿದ ಭಾರತೀಯ ಯೋಧರು

ಶ್ರೀನಗರ, ಜೂ.22 : ಕಾಶ್ಮೀರದಲ್ಲಿ ಪುಲ್ವಾಮದ ಕಾಕ್ಪೋರಾದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆಯು ಗುರುವಾರ ಭಾರಿ ಪ್ರಮಾಣದ ಎನ್ ಕೌಂಟರ್‍ ನಡೆಸಿ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಗಿದೆ.

ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ತಕ್ಷಣ ಭಾರತೀಯ ಸೇನೆಯ ಯೋಧರು ಸನ್ನದ್ಧರಾಗಿ ದಾಳಿ ನಡೆಸಿದರು. ಈ ವೇಳೆ ಉಗ್ರರು ಸೈನಿಕರ ಮೇಲೆ ಉಗ್ರರು ಪ್ರತಿದಾಳಿ ಮಾಡಿದರು. ಸೈನಿಕರು ಕೂಡ ಪ್ರತಿದಾಳಿ ಮಾಡಿದ್ದು. ಹಲವಾರು ಗಂಟೆಗಳ ಕಾಲ ನಡೆದ ಎನ್‍ಕೌಂಟರ್ ಇದೀಗ ಅಂತ್ಯವಾಗಿದೆ.

ದಾಳಿ ಮಾಡುತ್ತಿದ್ದ ಎಲ್ಲ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೃತ ಉಗ್ರರಿಂದ 3 ಎಕೆ47 ಬಂದೂಕು ಮತ್ತು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನೆಯಲ್ಲಿ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ದಳದ ಓರ್ವ ಯೋಧ ಗಾಯಗೊಂಡಿದ್ದಾನೆ. ಗಾಯಾಳು ಸೈನಿಕನನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಉಗ್ರರನ್ನು ಲಷ್ಕರ್ ಸಂಘಟನೆಯ ಮಜೀದ್ ಮೀರ್, ಶರೀಖ್ ಅಹ್ಮಮದ್ ಮತ್ತು ಇರ್ಷಾದ್ ಅಹ್ಮದ್ ಎಂದು ಗುರುತು ಪತ್ತೆ ಮಾಡಲಾಗಿದೆ.

ಮತ್ತೊಂದೆಡೆ ಗಡಿ ನಿಯಂತ್ರಣ ರೇಖೆ ಬಳಿಯ ಪಲನ್‍ವಾಲಾ ಬಳಿ ಎಕೆ47 ಬಂದೂಕುಸಹಿತ ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿದಾಳಿ ಮಾಡಿದ ಸೇನೆ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದೆ. ಸೇನೆ ದಾಳಿ ಮಾಡುತ್ತಿದ್ದಂತೆ ಉಗ್ರರು ತಮ್ಮ ಶಸ್ತ್ರಾಸ್ತ್ರದಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಉಗ್ರರ ಬಳಿಯಿದ್ದ ಎಕೆ47 ಬಂದೂಕು ಮತ್ತು ಸ್ಫೋಟಕಗಳು ಸೈನಿಕರ ವಶವಾಗಿವೆ.

-ಎನ್.ಬಿ.

Leave a Reply

comments

Related Articles

error: