ದೇಶಪ್ರಮುಖ ಸುದ್ದಿವಿದೇಶ

ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಕೆನ್ನೆಥ್ ಜಸ್ಟರ್ ನೇಮಕ

ವಾಷಿಂಗ್ಟನ್, ಅಮೆರಿಕ, ಜೂ. 22 : ವೈಟ್‍ಹೌಸ್‍ನಲ್ಲಿ ಹಿರಿಯ ಅಧಿಕಾರಿಯಾಗಿರುವ ಕೆನ್ನೆಥ್ ಜಸ್ಟರ್ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕ ರಾಯಭಾರಿಯಾಗಿ ನೇಮಿಸಲಾಗಿದೆ.

ಕೆನ್ನೆಥ್ ಜಸ್ಟರ್ ಅವರು ಈ ಹುದ್ದೆಗೆ ಅತ್ಯಂತ ಸೂಕ್ತ ವ್ಯಕ್ತಿ ಎಂದು ವೈಟ್‍ಹೌಸ್‍ನ ಉಪ ವಕ್ತಾರ ಲಿಂಡ್ಸೆ ಇ ವಾಲ್ಟರ್ಸ್ ಹೇಳಿದ್ದಾರೆ. ಅಧ್ಯಕ್ಷರ ಅಧಿಕಾರಿಯಾಗಿ ವೈಟ್‍ಹೌಸ್‍ನ ಅಮೆರಿಕದ ಆಡಳಿತದೊಂದಿಗೆ ಸೌಹಾರ್ದ ಬಾಂಧವ್ಯ ಹೊಂದಿರುವ ಜಸ್ಟರ್ ಅವರು, ಭಾರತಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಈ ಕಾರಣದಿಂದ ಈ ಸ್ಥಾನಕ್ಕೆ ಜಸ್ಟರ್ ಅವರೇ ಸೂಕ್ತ ಆಯ್ಕೆ ಎಂದು ವಾಲ್ಟರ್ಸ್ ಹೇಳಿದ್ದಾರೆ.

ಪ್ರಸ್ತುತ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಕೆನ್ನೆಥ್ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದು, ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ವಿಭಾಗದ ಉಪಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

-ಎನ್.ಬಿ.

Leave a Reply

comments

Related Articles

error: