ಮೈಸೂರು

ಖೋಟಾ ನೋಟು ಚಲಾಯಿಸಿದ ವ್ಯಕ್ತಿಗೆ 10 ವರ್ಷ ಜೈಲು

ಮೈಸೂರು,ಜೂ.22:- ಮೈಸೂರಿನ 7ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಖೋಟಾ ನೋಟು ಚಲಾವಣೆ ಮಾಡಿದ್ದ ವ್ಯಕ್ತಿಯೋರ್ವನಿಗೆ 10ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಶ್ಚಿಮ ಬಂಗಾಳದ ಮೊದಾನ್ ಮೊಯಿನ್ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ. 2015ರ ಫೆ.19ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಮಹದೇವ್ ಎಂಬವರಿಂದ 25 ನಿಂಬೆ ಹಣ್ಣುಗಳನ್ನು ಖರೀದಿಸಿ ಸಾವಿರ ರೂ.ನೋಟು ನೀಡಿದ್ದು, ಚಿಲ್ಲರೆಗಾಗಿ ಮಹದೇವ್ ಅಲ್ಲೇ ಇದ್ದ ಪಿಗ್ಮಿ ಕಲೆಕ್ಟರ್ ಬಳಿ ಕೇಳಿದಾಗ ನೋಟನ್ನು ಪರೀಕ್ಷಿಷಿದ ಅವರು ಅದು ಖೋಟಾನೋಟು ಎಂಬುದನ್ನು ಪತ್ತೆ ಹಚ್ಚಿ ತಕ್ಷಣ ನಜರ್ ಬಾದ್ ಪೊಲೀಸರ ವಶಕ್ಕೆ ನೀಡಿದ್ದರು. ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ಬಳಿ ಇದ್ದ ಮೂರು ಖೋಟಾನೋಟುಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದರು. ನೋಟನ್ನು ಪರೀಕ್ಷಿಸಿದ ಆರ್.ಬಿ.ಐ ವ್ಯವಸ್ಥಾಪಕರು ಇದು ಖೋಟಾ ನೋಟು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮೊದಾನ್ ಮೊಯಿನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: