ಸುದ್ದಿ ಸಂಕ್ಷಿಪ್ತ

ಜೂ.27 ರಂದು ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಮಡಿಕೇರಿ,ಜೂ.22-ತಾಲೂಕಿನಲ್ಲಿ 1 ನೇ ತರಗತಿಯಿಂದ 10ನೇ ತರಗತಿ ವ್ಯಾಪ್ತಿಗೊಳಪಡುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ 2017-18ನೇ ಸಾಲಿನ ಸಮನ್ವಯ ಶಿಕ್ಷಣ ಸರ್ವ ಶಿಕ್ಷಣ ಅಭಿಯಾನದಡಿ ವೈದ್ಯಕೀಯ ಮೌಲ್ಯಾಂಕನ ಶಿಬಿರವು ಜೂ.27 ರಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಶೇಷ ಅಗತ್ಯತೆಯುಳ್ಳ  ಮಕ್ಕಳೊಂದಿಗೆ ಪೋಷಕರು ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ತಾಲ್ಲೂಕು ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ ಸಮನ್ವಯಾಧಿಕಾರಿ ತಿಳಿಸಿದ್ದಾರೆ. (ವರದಿ-ಕೆ.ಸಿ.ಐ,ಎಂ.ಎನ್)

Leave a Reply

comments

Related Articles

error: