ಕರ್ನಾಟಕ

ಎನ್.ಸಿ.ಸಿ. ಕೆಡೆಟ್ ಗಳಿಂದ ಯೋಗ ಪ್ರದರ್ಶನ

ಮಡಿಕೇರಿ,ಜೂ.22-ಕರ್ನಾಟಕ ಮತ್ತು ಗೋವಾದ ಎನ್.ಸಿ.ಸಿ. ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 9ನೇ ಬೆಟಾಲಿಯನ್ ಎನ್.ಸಿ.ಸಿ ವತಿಯಿಂದ ಆಚರಿಸಲಾಯಿತು.

ಎಲ್ಲ ಎನ್.ಸಿ.ಸಿ.ಕೆಡೆಟ್‍ಗಳು, ಎಫ್.ಎಂ.ಕೆ.ಎಂ.ಸಿ. ಕಾಲೇಜು ಹಾಗೂ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಯೋಗ ಮಾಡಿದರು. 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ.ಗೆ ಸೇರಿದ 580 ಎನ್.ಸಿ.ಸಿ. ಕೆಡೆಟ್‍ಗಳು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 8 ಕಾಲೇಜು ಹಾಗೂ 19 ಶಾಲೆಗಳ ಎನ್.ಸಿ.ಸಿ. ಕೆಡೆಟ್‍ಗಳು ಸೇರಿದಂತೆ 47 ಸಾವಿರ ಎನ್.ಸಿ.ಸಿ. ಕೆಡೆಟ್‍ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮಾಡಿದರು. (ವರದಿ-ಕೆ.ಸಿ.ಐ,ಎಂ.ಎನ್)

Leave a Reply

comments

Related Articles

error: