ಮೈಸೂರು

ಜೂ.23ಕ್ಕೆ ಸಿನಿಮಾ ಸಮಯದಲ್ಲಿ ರೈಲ್ವೆ ಚಿಲ್ಡ್ರನ್

ಮೈಸೂರು,ಜೂ.22-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಿನಿಮಾ ಸಮಯದಲ್ಲಿ ಜೂ.23  ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಪೃಥ್ವಿ ಕೊಣನೂರು ಅವರು ನಿರ್ದೇಶಿರುವ ಕನ್ನಡ ಚಲನಚಿತ್ರ ರೈಲ್ವೆ ಚಿಲ್ಡ್ರನ್ ಪ್ರದರ್ಶನಗೊಳ್ಳುವುದು.      ಮನೆಗಳಿಂದ ದೂರ ಓಡಿ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ವಾಸಿಸುವ ಮಕ್ಕಳ ಜೀವನ, ದೈನಂದಿನ ಜೀವನ ನಡೆಸುವ ಉದ್ದೇಶ ಹೊಂದಿರುವ ಮಕ್ಕಳು ಅಪರಾಧಿಗಳಾಗಿ ಪರಿವರ್ತನೆಯಾಗುವ ಸಂದಿಗ್ಥತೆಗಳ ಬಗ್ಗೆ  ಚಲನಚಿತ್ರ ರೂಪುಗೊಂಡಿವೆ.

ಇದಕ್ಕೂ ಮುನ್ನ ಸಂಜೆ 5.30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು. (ವರದಿ-ಎಂ.ಎನ್)

 

Leave a Reply

comments

Related Articles

error: