ಕರ್ನಾಟಕಪ್ರಮುಖ ಸುದ್ದಿ

ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಿದ್ದ ಬಾಗಲಕೋಟೆಯ ಹುಡುಗ ನಾಪತ್ತೆ

ಬಾಗಲಕೋಟೆ, ಜೂ.22 : ಉನ್ನತ ವಿದ್ಯಾಭ್ಯಾಸ ಮಾಡಲು ಜರ್ಮನಿಗೆ ಹೋಗಿದ್ದ ಬಾಗಲಕೋಟೆ ಇಂಜೀನಿಯರಿಂಗ್ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ದಿಢೀರ್ ನಾಪತ್ತೆ ಸುದ್ದಿ ಕೇಳಿ ಆತನ ಕುಟುಂಬ ಆತಂಕದಲ್ಲಿ ಸಿಲುಕಿದೆ.

ಮಂಜುನಾಥ ಸಿದ್ದಣ್ಣ ಚೂರಿ ಎಂಬ ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಗ್ರಾಮದ ನಿವಾಸಿ ಬಿಇ ಮುಗಿಸಿ ಎಂ.ಎಸ್.ಅಧ್ಯಯನಕ್ಕೆಂದು ಜರ್ಮನಿಗೆ ತೆರಳಿದ್ದ ನಾಪತ್ತೆಯಾಗಿದ್ದಾನೆ. ಕಳೆದ ವರ್ಷ ಮಾಸ್ಟರ್ ಆಫ್ ಸಾಫ್ಟ್‍ವೇರ್ ಅಧ್ಯಯನಕ್ಕೆ ಎಂದು ಜರ್ಮನಿಯ ಹ್ಯಾಂಬರ್ಗ್ ಯೂನಿವರ್ಸಿಟಿಗೆ ಮಂಜುನಾಥ್ ತೆರಳಿದ್ದ.

ಪ್ರತಿದಿನ ಮಂಜು ತನ್ನ ತಾಯಿಗೆ ಫೋನ್ ಮಾತನಾಡುತ್ತಿದ್ದ. ಈ ಮಧ್ಯೆ ತಂದೆ ಅಪಘಾತದಲ್ಲಿ ಮೃತರಾಗಿದ್ದರಿಂದ ಮಂಜು ಕೊಂಚ ವಿಚಲಿತನಾಗಿದ್ದ. ಆದರೆ ಭಾನುವಾರದಿಂದ ಇತ್ತೀಚಿಗೆ ಒಂದೇ ಒಂದು ಕರೆಯನ್ನೂ ಮಾಡಿಲ್ಲ. ಹೀಗಾಗಿ ತಾಯಿ ಮಹಾನಂದೆ ಮನೆಗೆ ಬಂದವರನ್ನೇಲ್ಲಾ ಮಗನನ್ನು ಹುಡುಕಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಮಂಜುನಾಥ ತಾನಿದ್ದ ರೂಮ್‍ ಕೀಲಿಯನ್ನು ತನ್ನ ಸ್ನೇಹಿತನಿಗೆ ಕೋರಿಯರ್ ಮೂಲಕ ತಲುಪಿಸಿ, ಫೋನ್ ಸ್ವಿಚ್‍ಆಫ್ ಮಾಡಿದ್ದಾನೆ. ಇದು ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ.

ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಭಾರತೀಯ ವಿದೇಶಾಂಗ ಇಲಾಖೆಗೆ ಮಂಜುನಾಥನ ನಾಪತ್ತೆಯ ಮಾಹಿತಿ ಬಂದಿದೆ. ಮಂಜುನಾಥನ ಪೋಷಕರಿಗೆ ಈ ಬಗ್ಗೆ ಸುದ್ದಿ ತಲುಪಿಸಲಾಯಿತು. ನಾಪತ್ತೆ ಸುದ್ದಿ ತಿಳಿದ ಮಂಜುನಾಥನ ಪೋಷಕರು ಮಗನನ್ನ ಹುಡುಕಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.

-ಎನ್.ಬಿ.

Leave a Reply

comments

Related Articles

error: