ದೇಶಪ್ರಮುಖ ಸುದ್ದಿ

ಮೂರು ಹೈಕೋರ್ಟ್‍ಗಳಿಗೆ ನ್ಯಾಯಮೂರ್ತಿಗಳ ನೇಮಕ

ನವದೆಹಲಿ, ಜೂ.22 : ದೇಶದ ಮೂರು ಹೈಕೋರ್ಟ್‍ಗಳಿಗೆ ಹೊಸದಾಗಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.

ಸುಪ್ರೀಂ ಕೋರ್ಟ್, ಹೈಕೋರ್ಟ್‍ಗಳಿಗೆ ನ್ಯಾಯಮೂರ್ತಿಗಳ ನಾಮನಿರ್ದೇಶನ ಮಾಡುವ ಮಾರ್ಗದರ್ಶಿ ಸೂತ್ರಗಳ ವಿಚಾರವಾಗಿ ಇತ್ತೀಚೆಗೆ ಸರ್ಕಾರ ಮತ್ತು ನ್ಯಾಯಾಂಗದ ಮಧ್ಯೆ ಹಲವು ಭಿನ್ನಾಭಿಪ್ರಾಯಗಳು ಉದ್ಭವಿಸಿದ್ದರೂ ನೇಮಕಾತಿ ಪ್ರಕ್ರಿಯೆ ಯಾವುದೇ ತೊಂದರೆ ಇಲ್ಲದೆ ನಡೆದಿದೆ.

ಮದ್ರಾಸ್ ಹೈಕೋರ್ಟ್‍ಗೆ ಆರು, ಛತ್ತೀಸಗಡ ಹೈಕೋರ್ಟ್‍ಗೆ ಹಾಗೂ ಪಂಜಾಬ್-ಹರಿಯಾಣ ಹೈಕೋರ್ಟ್‍ಗೆ ತಲಾ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಿಕ ಮಾಡಿ ಆದೇಶ ಹೊರಡಿಸಲಾಗಿದೆ.

ನ್ಯಾಯಮೂರ್ತಿಗಳ ನಾಮನಿರ್ದೇಶನದ ವಿಚಾರವಾಗಿ ಕಾರ್ಯಸೂಚಿ ಪಟ್ಟಿಗೆ ಅಂತಿಮ ಸ್ವರೂಪ ನೀಡುವ ವಿಚಾರವಾಗಿ ಭಿನ್ನಾಭಿಪ್ರಾಯಗಳು ಉದ್ಭವಿಸಿದ್ದವು. ಈ ವಿಚಾರದಲ್ಲಿ ಒಮ್ಮತ ಏರ್ಪಡದಿದ್ದರೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು  ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇತ್ತಿಚೆಗೆ ಭರವಸೆಯ ಮಾತುಗಳನ್ನಾಡಿದ್ದರು.

-ಎನ್.ಬಿ.

Leave a Reply

comments

Related Articles

error: