ಕರ್ನಾಟಕ

ಪೊಲೀಸ್ ಠಾಣೆಯಲ್ಲೇ ಗುಂಪು ಘರ್ಷಣೆ

ರಾಜ್ಯ, (ಕೋಲಾರ) ಜೂ.22:  ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ.

ನಗರಸಭೆ ಉಪಚುನಾವಣೆ ವಿಚಾರವಾಗಿ ಪರಸ್ಪರ ದೂರು ಕೊಡಲು ಬಂದಿದ್ದ ಎರಡು ಗುಂಪುಗಳು ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ. ವರ್ತೂರು ಪ್ರಕಾಶ್ ಗುಂಪಿನವರು ಜೆಡಿಎಸ್ ಕಾರ್ಯಕರ್ತರಾದ ವಿಶ್ವನಾಥ ಮತ್ತು ನಾಗಭೂಷಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಠಾಣೆ ಮತ್ತು ಅಂಗಳದಲ್ಲಿ ಅಟ್ಟಾಡಿಸಿ ಹೊಡೆದಾಡಿದ್ದಾರೆ.

ಠಾಣೆಯಲ್ಲಿ ಸಾಕಷ್ಟು ಪೊಲೀಸರು ಇದ್ದರೂ ಸಹ ನಿಯಂತ್ರಿಸಲು ವಿಫಲರಾಗಿದ್ದಾರೆ. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: