ಮೈಸೂರು

ಬಾಲ್ಯ ವಿವಾಹ ತಡೆ ಮತ್ತು ಶಾಲೆ ಕಡೆ ನನ್ನ ನಡೆ” ಜಾಥಾಕ್ಕೆ ಚಾಲನೆ

ಮೈಸೂರು,ಜೂ.22:- ಬಾಲ್ಯ ವಿವಾಹ ತಡೆ ಮತ್ತು ಶಾಲೆ ಕಡೆ ನನ್ನ ನಡೆ” ಮತ್ತು ಮಕ್ಕಳ ಕಾಯ್ದೆಗಳಿಗೆ ಸಂಬಂಧಿಸಿದಂತೆ ಬೃಹತ್ ಜಾಗೃತಿ ಆಂದೋಲನದ ಪ್ರಚಾರ ವಾಹನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಜಿ.ಎಂ.ಪಾಟೀಲ್‍  ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂಬ ಉದ್ದೇಶದಿಂದ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಹೆಗ್ಗಡದೇವನ ಕೋಟೆಯಲ್ಲಿ ಧೈರ್ಯದಿಂದ ಬಾಲಕಿ ಪೊಲೀಸರಿಗೆ ಬಾಲ್ಯವಿವಾಹದ ಕುರಿತು ತಿಳಿಸಿರುವುದು ಶ್ಲಾಘನೀಯ ಎಂದರು. ಪೋಷಕರು ಮಕ್ಕಳಿಗೆ ಮೊದಲು ವಿದ್ಯಾಭ್ಯಾಸ ನೀಡಿ ನಂತರ ವಿವಾಹದ ವಯಸ್ಸಿಗೆ ವಿವಾಹ ಮಾಡಿ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದರು. ಇದೇ ಸಂದರ್ಭ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಕಾನೂನು ಪ್ರಾಧಿಕಾರದ ಅಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: