ದೇಶಪ್ರಮುಖ ಸುದ್ದಿ

ಜಿಎಸ್‍ಟಿ ಜಾರಿಯಾದರೆ ರೈಲಿನ ಎಸಿ, ಪ್ರಥಮ ದರ್ಜೆ ಪ್ರಯಾಣ ದರ ಹೆಚ್ಚಳ

ನವದೆಹಲಿ, ಜೂ.22 : ಸರಕು ಮತ್ತು ಸೇವಾ ತೆರಿಗೆ ಜುಲೈ 1 ರಿಂದ ಜಾರಿಗೆ ಬರಲಿರುವ ಕಾರಣ ಎಸಿ ಮತ್ತು ಪ್ರಥಮ ದರ್ಜೆ ಬೋಗಿಗಳಲ್ಲಿ ಪ್ರಯಾಣ ದರ ಏರಿಕೆಯಾಗಲಿದೆ.

ಸೇವಾ ಶುಲ್ಕವನ್ನು ರೈಲುಗಳ ಎಸಿ ಮತ್ತು ಪ್ರಥಮ ದರ್ಜೆ ರೈಲುಗಳ ಪ್ರಯಾಣ ದರದ ಮೇಲೆ ಮಾತ್ರ ಹಾಕಲಾಗುತ್ತದೆ. ಟಿಕೆಟ್ ಮೇಲೆ ಸೇವಾ ಶುಲ್ಕವಿದ್ದರೆ ಜಿಎಸ್‍ಟಿ ಜಾರಿಯಿಂದ ಶೇಕಡಾ 4.5 ರಿಂದ ಶೇಕಡಾ 5 ರಷ್ಟು ದರ ಹೆಚ್ಚಾಗಲಿದೆ. ಸುಲಭವಾಗಿ ಹೇಳಬೇಕೆಂದರೆ ಟಿಕೆಟ್ ಬೆಲೆ ಎರಡು ರೂಪಾಯಿಗಳಿದ್ದರೆ ಮುಂದಿನ ತಿಂಗಳಿನಿಂದ ಪ್ರಯಾಣಿಕರು ಹತ್ತು ರೂಪಾಯಿ ಹೆಚ್ಚುವರಿ ಪಾವತಿ ಮಾಡಬೇಕಾತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಈಗಾಗಲೇ ಜುಲೈ 1ರಂದು ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿಗೆ ಸಿದ್ಧವಾಗಿದ್ದು, ಪ್ರತಿಯೊಂದು ರಾಜ್ಯದಲ್ಲಿಯೂ ಇಲಾಖೆಯ ಈ ವಿಷಯದಲ್ಲಿ ತೊಂದರೆಯಾಗದಂತೆ ಸುಗಮ ಕಾರ್ಯನಿರ್ವಹಣೆ ನಡೆಯಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಜಿಎಸ್‍ಟಿಯ ಪರಿಣಾಮಕಾರಿ ಜಾರಿಗೆ ಸಲಹೆಗಾರರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: