ಮೈಸೂರು

ಕಲಿಸು ಫೌಂಡೇಶನ್ನಿನ ಬ್ರಾಂಡ್ ರಾಯಭಾರಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು,ಜೂ.22:- ಕಲಿಸು ಫೌಂಡೇಶನ್ನಿನ ಬ್ರಾಂಡ್ ರಾಯಭಾರಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇಮಕಗೊಂಡಿದ್ದಾರೆ.

ನಗರದ ಕುಂಬಾರ ಕೊಪ್ಪಲಿನಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಹಾರಾಜರಿಂದ ಕಲಿಯಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪರಿಸರ ಸಧ್ಯಯನ, ಶುಚಿತ್ವದ ಕುರಿತು ತಿಳಿಸಿದರು. ಮಕ್ಕಳು ಯಾವ ರೀತಿ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು, ಯಾವ ರೀತಿ ನಡತೆಗಳನ್ನು ಹೊಂದಿರಬೇಕು ಎನ್ನುವುದರ ಕುರಿತು ತಿಳಿಸಿಕೊಟ್ಟರು.

ನಂತರ ವಿದ್ಯಾರ್ಥಿಗಳು ಅವರಿಗೆ ನಿಮ್ಮ ನೆಚ್ಚಿನ ಬಣ್ಣ ಯಾವುದು, ವಿದೇಶಿ ಶಿಕ್ಷಣ, ಭಾರತೀಯ ಶಿಕ್ಷಣದ ನಡುವಿನ ವ್ಯತ್ಯಾಸವೇನು, ನೆಚ್ಚಿನ ನಟ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಈ ಸಂದರ್ಭ ಕಲಿಸು ಫೌಂಡೇಶನ್ನಿನ ಸಂಸ್ಥಾಪಕ ಎಂ.ಎಂ.ನಿಖಿಲೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: